
ಉದಯವಾಹಿನಿ,ಚಿಂಚೋಳಿ: ರಾಷ್ಟ್ರದ ಇಂದಿನ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ರಾಷ್ಟ್ರಭಕ್ತಿಯ ಬಗ್ಗೆ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ತಾಲ್ಲೂಕಿನ ಹಾರಕೂಡ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದು ಪರಿಷದ್,ಬಜರಂಗದಳ ವತಿಯಿಂದ ಹಮ್ಮಿಕೊಂಡಿದ್ದ ಶೌರ್ಯ ಜಾಗರಣಾ ರಥಯಾತ್ರೆಯ ಶೋಭಯಾತ್ರೆ ಹಾಗೂ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಹಿರಿಯ ನಾಗರಿಕರು ಮಕ್ಕಳಿಗೆ ಹಿಂದು ಧರ್ಮದ ಕುರಿತು ಜಾಗೃತಿ ಮೂಡಿಸಬೇಕು.ಯುವತಿಯರು ಯಾವುದೇ ತಪ್ಪು ಮಾಡದ ಹಾಗೆ ಹಿಂದು ಧರ್ಮದ ಬಗ್ಗೆ ವಿಸ್ತಾರವಾಗಿ ತಿಳಿಸಬೇಕು,ಯುವಕರು ದುಶ್ಚಟಗಳಿಗೆ ಬಲಿಯಾಗದೆ ಹಿಂದು ಧರ್ಮದ ಚಿಂಚನೆ ಮಾಡಿ ರಾಷ್ಟ್ರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಷ್ಟ್ರ ವಿರೋಧಿ,ಧರ್ಮ ವಿರೋಧಿ ಶಕ್ತಿಗಳಿಗೆ ತಡೆಗಟ್ಟುವ ಕೆಲಸ ಯುವಕರು ಮಾಡಬೇಕು.
ರಾಷ್ಟ್ರದಲ್ಲಿ ರಾಷ್ಟ್ರ ವಿರೋಧಿ,ಧರ್ಮ ವಿರೋಧಿ,ನೆಕ್ಸಲೈಟ್,ಡ್ರಗ್ಸ್ ಮಾಫಿಯಾದಂತಹ ದೊಡ್ಡ ದೊಡ್ಡ ಶಕ್ತಿಗಳಿಗೆ ನರೇಂದ್ರ ಮೋದಿಯವರು ತಡೆಗಟ್ಟುವು ಕೆಲಸ ಮಾಡುತ್ತಿದ್ದಾರೆ,ಈಡಿ ವಿಶ್ವವೆ ಭಾರತ ದೇಶದ ಕಡೆ ಆಶ್ಚರ್ಯದಿಂದ ನೋಡುತ್ತಿದೆ ಕಳೆದ ಹತ್ತು ವರ್ಷದಿಂದ ಮೋದಿಯವರ ಆಡಳಿತ ನೋಡಿ ರಾಷ್ಟ್ರೀಯ ಮತು ಅಂತರರಾಷ್ಟ್ರೀಯ ನೆಕ್ಸೇಲೈಟ್ ಗಳು ತಡೆಗಟ್ಟಿ ಅನೇಕರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಿ ಭಯಹುಟ್ಟಿ ಮಾದಕ ದ್ರವ್ಯ ವಸ್ತುಗಳಿಗೂ ಕಡಿವಾಣ ಹಾಕಿ ಕೇರಳ,ರಾಜಸ್ಥಾನದಂತ ಅನೇಕ ರಾಜ್ಯಗಳಲ್ಲಿ ಸುಮಾರು 25ಸಾವಿರ ಕೋಟಿಯಷ್ಟು ಮಾದಕ ದ್ರವ್ಯ ವಸ್ತುಗಳು ಬಂಧಿಸಿ ತಡೆಗಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ್ ಪ್ರಚಾರಕರು ಬಸವರಾಜ ಜೀ ಬೆಂಗಳೂರು,ಸುಲೇಪೇಟ ತೆಂಗಿನಮಠದ ಸಿದ್ದರಾಮ ಮಹಾಸ್ವಾಮಿಗಳು,ಅಂಬರೀಶ ಸುಲೇಗಾಂವ,ಬಸವರಾಜ ಸೂಗೂರ,ಪ್ರದೀಪಕುಮಾರ,ರಾಘವೇಂದ್ರ ಮುಸ್ತಾಜಾರ,ಅಜೇಯ ಬಿದ್ರಿ,ಮೇಘರಾಜ ಗುತ್ತೇದಾರ,ಜಿಲ್ಲಾ ಸಂಚಾಲಕರು,ವಿರೇಂದ್ರ ಮುರುಡಾ,ತಾಲ್ಲೂಕಾ ಅಧ್ಯಕ್ಷ ಮಹೇಶ ಕಿವಣೂರಕರ್,ಕಾರ್ಯಾಧ್ಯಕ್ಷ ಗುರುರಾಜ ಜೋಷಿ,ಕನ್ಯಾಕುಮಾರಿ ಮುರುಡಾ,ಸಂಗೀತ ಪವ್ಹಾರ,ಸಿದ್ದಯ್ಯಸ್ವಾಮಿ,ವಸಂತ,ಕಿ ರಣ,ಆನಂದ ಗೌಳಿ,ಶ್ರೀಹರಿ ಕಾಟಾಪೂರ,ಭೀಮಶೇಟ್ಟಿ ಮುಕ್ಕಾ,ಶ್ರೀದೇವಿ ಪಾಟೀಲ,ನೀಲಮ್ಮಾ,ಸಂಧ್ಯಾಪಾಟೀಲ,ಮಲ್ ಲಿಕಾರ್ಜುನ ಉಡುಪಿ ಅನೇಕರಿದ್ದರು.
ಶೌರ್ಯ ಜಾಗರಣ ಯಾತ್ರಾ ಉದ್ದೇಶ: ಹಿಂದು ಯುವಕರಲ್ಲಿ ಪೂರ್ವಜರ ಬಗ್ಗೆ ಗೌರವಭಾವ ಜಾಗೃತಿಗೊಳಿಸುವುದು,ದೇಶಕ್ಕಾಗಿ ಸ್ವಾಭಿಮಾನದಿಂದ ಬದುಕುವ ಸಂಕಲ್ಪ,ಹಿಂದು ಧರ್ಮ ಸಂಸ್ಕೃತಿ ಬಗ್ಗೆ ಶ್ರಧ್ಧೆ ಜಾಗೃತಿಗೊಳಿಸಿ ವೈಜ್ಞಾನಿಕ ಮಹತ್ವ ತಿಳಿಸುವುದು,ಸಮಾಜಿಕ ಸಾಮರಸ್ಯಕ್ಕಾಗಿ ಸಂಕಲ್ಪ ಬದ್ದರಾಗುವುದು,ದೇಶಭಕ್ತಿ ಬಲಿಶಾಲಿ ಹಿಂದು ಅವಶ್ಯಕತೆ ಮಹತ್ವ ತಿಳಿಸುವುದು,ರಾಷ್ಟ್ರಕ್ಕಾಗಿ ಸ್ವಾವಲಂಬಿ ಸ್ವಾಭಿಮಾನಿ ರಾಷ್ಟ್ರಭಕ್ತ ಜೀವನ ನಡೆಸುವ ಬದ್ದತೆ ನಿರ್ಮಾಣ ಮಾಡುವುದು :- ಚಕ್ರವರ್ತಿ ಸೂಲಿಬೆಲೆ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕರು.
