ಉದಯವಾಹಿನಿ, ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಾನ್ ಚಿತ್ರದ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಬೋಲ್ಡ್ ಆಗಿ ಕಾಣುತ್ತಿದ್ದಾರೆ. ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಆಂಧ್ರ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ರಣಬೀರ್-ರಶ್ಮಿಕಾ ಲವ್ ಸ್ಟೋರಿ ಇದೆ.
ರಣಬೀರ್ ಜೊತೆ ಪ್ರೀತಿಯಲ್ಲಿ ಬಿದ್ದ ಗೀತಾ ತನ್ನ ಗೆಳೆಯನನ್ನು ಮನೆಯವರ ಮುಂದೆ ತಂದು ನಿಲ್ಲಿಸಿದಾಗ ಇಡೀ ಕುಟುಂಬವೇ ಪ್ರಶ್ನೆಗಳ ಸುರಿಮಳೆಗರೆದಾಗ ಇಬ್ಬರೂ ಮನೆಯವರ ಮುಂದೆ ಲಿಪ್ ಲಾಕ್ ಮಾಡಿದ್ದಾರೆ. ಮನೆಯಿಂದ ಹೊರಟು ಖಾಸಗಿ ಜೆಟ್ ಹತ್ತುತ್ತಾರೆ. ರಶ್ಮಿಕಾ-ರಣಬೀರ್ ಜೆಟ್‌ನಲ್ಲಿ ರೋಮ್ಯಾನ್ಸ್ ಮಾಡುವ ಮೂಲಕ ಕಾಶ್ಮೀರ ಕಣಿವೆಯನ್ನು ತಲುಪುತ್ತಾರೆ.
