
ಉದಯವಾಹಿನಿ ವರದಿ ಫಲಶೃತಿ ಮುದ್ದೇಬಿಹಾಳ ; ಮುದ್ದೇಬಿಹಾಳ ಬಸ್ ನಿಲ್ದಾಣ ಹಾಗೂ ಪಟ್ಟಣದ ಶಾಲಾ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವ ಹಿಂಬಾಲಿಸುವರ ಮೇಲೆ ಪೋಲಿಸ್ ಕಣ್ಗಾವಲು ಇಡಲಾಗಿದ್ದು ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ತೊಂದರೆ ಕೊಟ್ಟರೆ ತಕ್ಕಪಾಠವನ್ನು ಪೋಲಿಸ್ ಕಲಿಸಲಿದ್ದಾರೆ ಎಂದರು ಪಿಎಸೈ ಸಂಜಯ ತಿಪರೆಡ್ಡಿ ತಿಳಿಸಿದ್ದಾರೆ ,
ಮುದ್ದೇಬಿಹಾಳ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಶಾಲಾ ಕಾಲೇಜುಗಳ ಹೋಗಿ ಬರುವ ವಿದ್ಯಾರ್ಥಿನಿರನ್ನು ಚುಡಾಯಿಸುವ ಅವರನ್ನು ಹಿಂಬಾಲಿಸುವ ಮತ್ತು ಬಸ್ ನಿಲ್ದಾಣದಲ್ಲಿ ಅನೇಕ ಸಮಸ್ಯೆಗಳ ಕುರಿತು ಉದಯವಾಹಿನಿ ಸವಿಸ್ತಾರ ವರದಿಯನ್ನು ಮಾಡಿತ್ತು ಇದಕ್ಕೆ ಸ್ಪಂದಿಸಿರುವ ಪಿಎಸೈ ಸಂಜಯ ತಿಪ್ಪರೆಡ್ಡಿ ಬಸ್ ನಿಲ್ದಾಣದಲ್ಲಿ ಪುಂಡ ಪೋಕರಿಗಳ ಜೊತೆಗೆ ಕೆಲವು ಕಾಲೇಜು ವಿದ್ಯಾರ್ಥಿಗಳು ಸಹ ಆಟಾಟೋಪ ಮಾಡುತ್ತಿದ್ದು ಇದಕ್ಕೆ ಬ್ರೇಕ್ ಹಾಕಲು ಪೋಲಿಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಕ್ರೈಂ ಪಿಎಸೈ ಸೇರಿದಂತೆ ನಮ್ಮ ಸಿಬ್ಬಂದಿ ಪಟ್ಟಣದ ಪ್ರಮುಖ ಕಾಲೇಜು ಹಾಗೂ ಬಸ್ ನಿಲ್ದಾಣದಲ್ಲಿ ಕಣ್ಗಾವಲು ಇರಿಸಿದ್ದು ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ತೂಂದರೆ ನೀಡುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬಸ್ ನಿಲ್ದಾಣದಲ್ಲಿ ಮಹಿಳಾ ಕೂಠಡಿ ಇದ್ದರು ಅದನ್ನು ಬಂದ್ ಮಾಡಲಾಗಿತ್ತು ಮತ್ತು ಬಸ್ ನಿಲ್ದಾಣದಲ್ಲಿ ಜೈನ್ ಶ್ವೇತಾಂಬರ ಸಮಾಜ ನಿರ್ಮಾಣ ಮಾಡಿದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿತ್ತು ಈ ಕುರಿತು ನಮ್ಮ ವರದಿಗೆ ಎಚ್ಚೆತ್ತ ಸಾರಿಗೆ ಘಟಕ ವ್ಯವಸ್ಥಾಪಕರು ಮಹಿಳಾ ಕೂಠಡಿ ಬಾಗಿಲು ಪುನಃ ತೆಗೆದಿದ್ದಾರೆ ಮತ್ತು ಶುದ್ದ ಕುಡಿಯುವ ನೀರಿನ ಘಟಕ ಸಾರ್ವಜನಿಕರಿಗೆ ಪುನಾರಂಭ ಮಾಡಿದ್ದಾರೆ. ಬಸ್ ನಿಲ್ದಾಣದ ಬಹುತೇಕ ಸಿಸಿ ಕ್ಯಾಮರಾಗಳು ಚಾಲನೆಯಲ್ಲಿ ಇಲ್ಲ ಮತ್ತು ಕೆಲವಡೆ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿಲ್ಲ ಈ ಕುರಿತು ಸಾರಿಗೆ ಡಿಸಿ ಅವರ ಗಮನಕ್ಕೆ ತರಲಾಗಿದ್ದು ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಬೇಕು ಬಸ್ ನಿಲ್ದಾಣದಲ್ಲಿ ಕಳ್ಳತನ ಸೇರಿದಂತೆ ಅನೇಕ ಪೋಕರಿಗಳ ಹಾವಳಿ ತಡೆಯಲು ಸಿಸಿ ಕ್ಯಾಮರಾಗಳ ಅವಳವಡಿಕೆ ಪ್ರಮುಖವಾಗಿದೆ
ಮಾಧ್ಯಮದಲ್ಲಿ ಬಂದ ಸುದ್ದಿ ಗಮನಿಸಿದ್ದೇನೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುವ ಕೆಲವು ವಿದ್ಯಾರ್ಥಿಗಳ ಮೇಲೆ ಪೋಲಿಸ್ ನೀಗಾ ಇಡಲಾಗಿದೆ ಮತ್ತು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ವರಗೆ ನಮ್ಮ ಸಿಬ್ಬಂದಿ ಗಸ್ತು ವಹಿಸಲಿದ್ದಾರೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವಿಧೇಯತೆ ಸಂಸ್ಕಾರ ಮತ್ತು ಮಾದಕ ವ್ಯಸನ ಕುರಿತು ಶೀಘ್ರದಲ್ಲೇ ಸಂವಾದ ಮಾಡಲಿದ್ದು ಮಹಿಳೆಯರನ್ನು ವಿದ್ಯಾರ್ಥಿನಿಯರನ್ನು ಚುಡಾಯಿಸುವ ಹಿಂಬಾಲಿಸುವರ ಕುರಿತು ದೂರು ನೀಡಲು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ದೂರು ಪಟ್ಟಿಗೆ ವ್ಯವಸ್ಥೆ ಮಾಡುತ್ತೇವೆ ; ಸಂಜಯ್ ತಿಪ್ಪತರೆಡ್ಡಿ ಪಿಎಸೈ ಮುದ್ದೇಬಿಹಾಳ ಪೋಲಿಸ್ ಠಾಣೆ
ಕುಡಿಯುವ ಪುನಾರಂಭಕ್ಕೆ ಸಂತಸ; ನಮ್ಮ ಶ್ವೇತಾಂಬರ ಜೈನ್ ಸಮಾಜದಿಂದ 5 ಲಕ್ಷ ರೂ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ( ಸ್ವಯಂ ತಂಪು ನೀರಿನ ಘಟಕ) ಮಾಡಲಾಗಿತ್ತು ಅನೇಕ ವರ್ಷಗಳಿಂದ ಅದು ಬಂದ್ ಆಗಿತ್ತು ಸ್ವಚ್ಚತೆ ಇರಲಿಲ್ಲ ಮಾಧ್ಯಮ ವರದಿಯಿಂದ ಪುನಃ ಶುದ್ದ ನೀರು ಸಾರ್ವಜನಿಕರಿಗೆ ದೂರೆಯುವಂತಾಗಿದ್ದು ಸಂತಸತಂದಿದೆ ; ವಿಕ್ರಮ್ ಓಸ್ವಾಲ್ ಜೈನ್ ಸಮಾಜ ಮುಖಂಡ ಪೂಕರಿಗಳ ತಕ್ಕ ಶಾಸ್ತಿ ಮಾಡಿ; ಗ್ರಾಮೀಣ ಭಾಗ ಸೇರಿದಂತೆ ಪಟ್ಟಣದಿಂದ ಬರುವ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿನಿಯರಿಗೆ ಚುಡಾಯಿಸುವುದು ಅವರನ್ನು ಹಿಂಬಾಲಿಸುವ ಅನೇಕ ಪೋಕರಿಗಳ ದಂಡು ಇದೆ ಇದರಲ್ಲಿ ಕಾಲೇಜು ವಿದ್ಯಾರ್ಥಿಗಳು ಇದ್ದು ಶಿಕ್ಷಣ ಕಲಿಯುವುದು ಬಿಟ್ಟು ಅಡ್ಡ ದಾರಿ ಹಿಡಿದ ಇವರಿಗೆ ತಕ್ಕಪಾಠ ಪೊಲೀಸ್ ರು ಕಲಿಸಬೇಕು ; ಸಂಜಯ ಬಾಗೇವಾಡಿ ಎಬಿವಿಪಿ ಮುಖಂಡ/ ಮುತ್ತು ಚಲವಾದಿ ದಲಿತ ವಿದ್ಯಾರ್ಥಿ ಪರಿಷತ್ತ ಅಧ್ಯಕ್ಷ 
