ಉದಯವಾಹಿನಿ, ಮುಂಬೈ : ಮಿಷನ್ ರಾಣಿಗಂಜ್ ನಾಯಕಿ ಪರಿಣಿತಿ ಚೋಪ್ರಾ ಇತ್ತೀಚೆಗೆ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ.
ನಟಿ ಪರಿಣಿತಿ ಚೋಪ್ರಾ ಅವರು ಉದಯಪುರದಲ್ಲಿ ರಾಜಕಾರಣಿ ರಾಘವ್ ಚಡ್ಡಾ ಅವರೊಂದಿಗೆ ಮದುವೆಯ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಪರಿಣಿತಿ ಚೋಪ್ರಾ ದೆಹಲಿಯಲ್ಲಿರುವ ತನ್ನ ಅತ್ತೆಯ ಮನೆಯಿಂದ ಮುಂಬೈಗೆ ಮರಳಿದ್ದಾರೆ. ಈ ಸಮಯದಲ್ಲಿ, ಅವರ ಪತಿ ಮತ್ತು ಎಎಪಿ ನಾಯಕ ರಾಘವ್ ಚಡ್ಡಾ ಅವರು ನಟಿಯೊಂದಿಗೆ ಕಾಣಿಸಲಿಲ್ಲ. ವಿಮಾನ ನಿಲ್ದಾಣದಲ್ಲಿ ಕಪ್ಪು ಉಡುಪಿನಲ್ಲಿ ನಟಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನವವಿವಾಹಿತ ನಟಿಯನ್ನು ಕಂಡ, ಪಾಪರಾಜಿಗಳು ಮುಗಿ ಬಿದ್ದರು. ನಟಿ ಕೂಡ ಅವರಿಗೆ ಪೋಸ್ ನೀಡಿದರು. ಪಾಪರಾಜಿಗಳು ನಟಿಗೆ ನಮ್ಮ ಭಾವ ಹೇಗೆ ಇದ್ದಾರೆ ಎಂದು ಪ್ರಶ್ನಿಸಿದಾಗ ನಾಚಿ ನೀರಾದ ಪರಿಣಿತಿ ನಂತರ ನಗುತ್ತಾ ಚೆನ್ನಾಗಿ ಇದ್ದಾರೆ ಎಂದು ಉತ್ತರಿಸಿದ್ದಾರೆ.ಪಾಪರಾಜಿಗಳು ನಟಿಗೆ ಮದುವೆ ಶುಭಾಶಯಗಳನ್ನು ಕೋರಿದ್ದರು.ನಟಿ ಎಲ್ಲರಿಗೂ ನಗುತ್ತಲೇ ಧನ್ಯವಾದ ಅರ್ಪಿಸಿದರು.
ಪರಿಣಿತಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯ ನಂತರ ಪ್ರಥಮ ಬಾರಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ನಟಿ ತುಂಬಾ ಅಂದವಾಗಿ ಕಾಣುತ್ತಿದ್ದರು.
