ಉದಯವಾಹಿನಿ, ಪುಣೆ: ಗೇಮಿಂಗ್ ಆಪ್‌ಗಳ ಸಾಧಕ-ಬಾಧಕಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಆನ್ಲೈನ್ ಆಟದಿಂದ ಹಲವರು ಹಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿಷೇಧಕ್ಕೆ ಹಲವರು ಆಗ್ರಹಿಸುತ್ತಿದ್ದಾರೆ.ಆದರೆ ಇಲ್ಲೊಬ್ಬ ಪಿಎಸ್ ಐ ಆನ್ಲೈನ್ ಗೇಮಿಂಗ್ ನಲ್ಲಿ ಆಡಿ ೧.೫ ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ಪಿಎಸ್‌ಐ ಸೋಮನಾಥ ಝಾಂಡೆ ಅವರು ಕ್ರಿಕೆಟ್‌ನಲ್ಲಿ ಒಲವು ಹೊಂದಿರುವ ಕಾರಣ, ಅವರು ಆನ್ ಲೈನ್ ಗೇಮಿಂಗ್‌ನಲ್ಲಿ ತಮ್ಮ ತಂಡವನ್ನು ಆಯ್ಕೆ ಮಾಡುವ ಮೂಲಕ ಈಗ ನಡೆಯುತ್ತಿರುವ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸುತ್ತಾರೆ. ಅವರು ಕಳೆದ ೨-೩ ತಿಂಗಳಿಂದ ಈ ಆಟವನ್ನು ಆಡಲು ಪ್ರಾರಂಭಿಸಿದ್ದು, ಹಲವಾರು ಬಾರಿ ತಮ್ಮ ಆಟದಲ್ಲಿ ಸೋಲನ್ನು ಕಂಡಿದ್ದಾರೆ.. ಮಂಗಳವಾರ ಅವರು ಬಾಂಗ್ಲಾದೇಶ ವಿರುದ್ಧದ ಇಂಗ್ಲೆಂಡ್ ಕ್ರಿಕೆಟ್ ಪಂದ್ಯದಲ್ಲಿ ತಂಡವನ್ನು ಫೀಲ್ಡಿಂಗ್ ಮಾಡುವ ಮೂಲಕ ಭಾಗವಹಿಸಿದ್ದರು. ಅವರ ತಂಡವು ನಂ.೧ಸ್ಥಾನ ಪಡೆಯುವ ಮೂಲಕ ಅವರು ೧.೫ಕೋಟಿ ಬಹುಮಾನವನ್ನು ಪಡೆದಿದ್ದಾರೆ. ಒಂದೂವರೆ ಕೋಟಿ ರೂಪಾಯಿ ಬಹುಮಾನ ಸಿಕ್ಕಿರುವುದಕ್ಕೆ ಸೋಮನಾಥ ಝಾಂಡೆ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಪಿಎಸ್‌ಐ ಸೋಮನಾಥ್ ಝೆಂಡೆ ಅವರನ್ನು ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಕರ್ತವ್ಯದ ಮೇಲೆ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!