
ಉದಯವಾಹಿನಿ ಸವದತ್ತಿ:ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಬೆಳಗಾವಿ ಸಾರ್ವಜನಿಕ ಆಸ್ಪತ್ರೆ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸವದತ್ತಿ ವೈದ್ಯ ಪೌ೦ಡೇಶನ್ ಸವದತ್ತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸವದತ್ತಿ ಯಲ್ಲಮ್ಮ ಮತ ಕೇತ್ರದ ಜನಪ್ರೀಯ ಶಾಸಕರಾದ ವಿಶ್ವಾಸ್ ವಸಂತ ವೈದ್ಯ ಇವರ 42ನೆಯ ಹುಟ್ಟು ಹಬ್ಬದ ನಿಮಿತ್ಯ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಸಾರ್ವ ಜನಿಕ ಆಸ್ಪತ್ರೆ ಸವದತ್ತಿಯಲ್ಲಿ ಏರ್ಪಡಿಸಲಾಗಿತ್ತು.
ಸವದತ್ತಿ ತಾಲೂಕಿನ ಸಮಸ್ತ ನಾಗರಿಕರು ಈ ಒಂದು ಶಿಬಿರದ ಲಾಭ ಪಡೆದರು. ಕ್ರೀಯಾಶೀಲ ತಾಲೂಕು ಆರೋಗ್ಯ ಅಧಿಕಾರಿಗಳು ಶ್ರೀಪಾದ ಸಬನೀಸ ಇವರ ‘ಮಾರ್ಗದರ್ಶನದಲ್ಲಿ ತಾಲೂಕಿನ ಎಲ್ಲಾ ಆರೋಗ್ಯ ಇಲಾಖೆಯ ವೈದ್ಯರು ಸಿಬ್ಬಂದಿ ವರ್ಗದವರು ಡಾಕ್ಟರ್ ಕೃಷ್ಣ ಮೋಹನ ಜಿಂಕಾ ಮತ್ತು ತಂಡ ಡಾ.ಎಸ್.ಬಿ ಹಿತ್ತಲಮನಿ ಸಲೀಂ ಕಿತ್ತೂರ ನೇತ್ರ ತಜ್ಞರು ಎನ್ ಸಿ ಡಿ ಘಟಕದ ಸಿಬ್ಬಂದಿಗಳು ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಶಿಬಿರವನ್ನು ಯಶಸ್ವಿಗೊಳಿಸಿದ್ದರು. ಶಿಬಿರಕ್ಕೆ ಬಂದತಹ ಫಲಾನುಭವಿಗಳಿಗೆ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.
