
ಉದಯವಾಣಿ ಶಿಡ್ಲಘಟ್ಟ : ರೇಷ್ಮೆ ನಗರ ಶಿಡ್ಲಘಟ್ಟದಲ್ಲಿ ವಿದ್ಯುತ್ ಸಮಸ್ಯೆಗಳಿಂದ ಸಮರ್ಪಕವಾಗಿ ವಿದ್ಯುತ್ ನೀಡದೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು ತೀವ್ರವಾಗಿದ್ದು ಸರಿಪಡಿಸಬೇಕೆಂದು ಸಂಘ ಸಂಸ್ಥೆಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳು ಚಿಂತಾಮಣಿ ವಿಭಾಗ ಕಾರ್ಯ ನಿರ್ವಹಣಾಧಿಕಾರಿ ಶುಭ ರವರಿಗೆ ಮನವಿಯನ್ನು ನೀಡಿದರು.ನಗರದ ಬೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಬುಧವಾರ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿದ್ಯುತ್ ಪೂರೈಕೆ ಮತ್ತು ವಿದ್ಯುತ್ ಸಮಸ್ಯೆ ಸರಿಪಡಿಸಬೇಕೆಂದು ಚಿಂತಾಮಣಿ ವಿಭಾಗ ಕಾರ್ಯ ನಿರ್ವಹಣಾಧಿಕಾರಿ ಶುಭಾ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.ತಾಲೂಕಿನಲ್ಲಿ ಹೆಚ್ಚು ರೇಷ್ಮೆ ಉದ್ಯಮ ಮಾಡುವುದರಿಂದ ಬೆಸ್ಕಾಂ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಏಕಾಏಕಿ ವಿದ್ಯುತ್ ಕಟ್ ಮಾಡುತ್ತಿರುತ್ತಾರೆ ಇದರಿಂದ ಬೇಸತ್ತ ವ್ಯಾಪಾರಿಗಳು ಮತ್ತು ರೈತರು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು ಅವರಿಗೂ ತೊಂದರೆಯಾಗುತ್ತಿದೆ ಆದ್ದರಿಂದ ವಿದ್ಯುತ್ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದರು.ವಿದ್ಯುತ್ ಪೂರೈಕೆ ಸದ್ಯಕ್ಕೆ ಸಕಾಲಕ್ಕೆ ನೀಡಲು ಕಷ್ಟವಾಗಿದ್ದು ಇರುವ ವಿದ್ಯುತ್ ಪೂರೈಕೆ ರೊಟೇಷನ್ ಪದ್ಧತಿಯಲ್ಲಿ ನೀಡಲು ಪ್ರಯತ್ನಿಸುತ್ತೇವೆ. ಇದಕ್ಕೆ ಎಲ್ಲರೂ ಸ್ಪಂದಿಸಬೇಕು ನಿಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಸಮಸ್ಯೆ ಬಗೆಹರಿಸಲು ತಿಳಿಸುತ್ತೇನೆ ಎಂದು ಚಿಂತಾಮಣಿ ವಿಭಾಗ ಕಾರ್ಯ ನಿರ್ವಹಣಾಧಿಕಾರಿ ಶುಭಾ ತಿಳಿಸಿದರು. ಸಹಾಯಕ ಕಾರ್ಯ ನಿರ್ವಹಣಾ ಇಂಜಿನಿಯರ್ ಚಿಂತಾಮಣಿ ವಿಭಾಗ ಸೂರ್ಯಪ್ರಕಾಶ್, ಸಹಾಯಕ ಕಾರ್ಯನಿರ್ವಾಹಕ ಗ್ರಾಮೀಣ ಉಪ ವಿಭಾಗ ಶಿಡ್ಲಘಟ್ಟ ಪ್ರಭು, ಸಹಾಯಕ ಕಾರ್ಯನಿರ್ವಾಹಕ ನಗರ ಉಪ ವಿಭಾಗ ಶಿಡ್ಲಘಟ್ಟ ಶಿವಪ್ರಸಾದ್ ಬಾಬು, ಸಹಾಯಕ ಲೆಕ್ಕಾಧಿಕಾರಿ ಮಂಜುನಾಥ್, ಗ್ರಾಮಾಂತರ ಸಹಾಯಕ ಲೆಕ್ಕ ಅಧಿಕಾರಿ ವೀರಭದ್ರಚಾರಿ ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
