
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಎಂಪಳ್ಳಿ ಗ್ರಾಮದ ವೃದ್ಧನೋಬ್ಬ ಬಯಲು ಬಹಿರ್ದೆಸೆಗೆ ಹೋಗಿ ಬರುತ್ತಿದ್ದಾಗ ಕೆಕೆಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪ್ರಯುಕ್ತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಹಣಮಂತ ಬಂಕಲಗಿ ತಿಳಿಸಿದ್ದಾರೆ. ಎಂಪಳ್ಳಿ ಗ್ರಾಮದ ನಿವಾಸಿ ಬಕ್ಕಯ್ಯ ತಿಪ್ಪಯ್ಯ (67) ಮೃತಪಟ್ಟಿದ್ದಾರೆ.ಕೆಕೆಆರ್ ಟಿಸಿ ಬಸ್ ಹಸರಗುಂಡಗಿಯಿಂದ ಎಂಪಳ್ಳಿ ವಾಯಾ ಮಾರ್ಗವಾಗಿ ಚಿಂಚೋಳಿಗೆ ಬರುತ್ತಿತ್ತು ಗ್ರಾಮದ ಸಮೀಪ ಬೆಳಿಗ್ಗೆ ಜಾವದಲ್ಲಿ ಬಯಲು ಬಹಿರ್ದೆಸೆಗೆ ಹೋಗಿ ಬರುತ್ತಿದ್ದ ಬಕ್ಕಯ್ಯ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಾರ ಗಾಯಗೊಂಡ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಬಸ್ ಡಿಕ್ಕಿ ಹೊಡೆದ ಸ್ಥಳಕ್ಕೆ ಪಿಎಸ್ಐ ಹಣಮಂತ ಬಂಕಲಗಿ ಹಾಗೂ ಸಿಬ್ಬಂದಿ ವರ್ಗದ ಪೋಲೀಸರು ಭೇಟಿನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
