ಉದಯವಾಹಿನಿ ಪಾವಗಡ: ಪಟ್ಟಣದ ಬಳ್ಳಾರಿ ಮುಖ್ಯರಸ್ತೆಯ ಮಾರುತಿ ಚಿತ್ರಮಂದಿರದ ಮುಂಭಾಗ ಡಿವೈಡರ್ ಮಧ್ಯೆ ಪುರಸಭೆ ವತಿಯಿಂದ ಅಳವಡಿಸಿರುವ ಬೀದಿ ದೀಪದ ಕಂಬವೊ0ದು ಬಿದ್ದು 2 ತಿಂಗಳು ಕಳೆದರೂ ಪುರಸಭೆ ಅಧಿಕಾರಿಗಳು ದುರಸ್ಥಿ ಕಾರ್ಯಕ್ಕೆ ಮುಂದಾಗಿಲ್ಲ ಎಂದು ನಾಗರೀಕರು ಆರೋಪಿಸುತ್ತಿದ್ದಾರೆ. ಕಳೆದ 2 ತಿಂಗಳ ಹಿಂದೆ ಟೋಲ್‌ಗೇಟ್ ಕಡೆಯಿಂದ ಸರ್ಕಲ್ ಕಡೆ ಹೋಗುತ್ತಿದ್ದ ಲಾರಿಯೊಂದು ಡಿವೈಡರ್‌ಗೆ ತಗುಲಿದ ಪರಿಣಾಮ ಬೀದಿ ದೀಪದ ಕಂಬ ನೆಲಕ್ಕೆ ಉರುಳಿದ್ದು ಅದನ್ನು ಇಲ್ಲಿಯವರೆಗೂ ನಿಲ್ಲಿಸಿ ದೀಪ ಅಳವಡಿಸದೇ ಪುರಸಭಾ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ವಾಹನದ ಮಾಲೀಕರಿಗೆ ರೂ. 9 ಸಾವಿರ ದಂಡ ವಿಧಿಸಿರುವುದು ಕೇಳಿ ಬಂದಿದೆ. ಇನ್ನಾದರೂ ಬೀದಿ ದೀಪ ಕಂಬ ದುರಸ್ಥಿ ಕಾರ್ಯಕ್ಕೆ ಪುರಸಭಾ ಅಧಿಕಾರಿಗಳು ಮುಂದಾಗುತ್ತಾರಾ ಪಟ್ಟಣದ ಜನತೆ ಕಾದು ನೋಡಬೇಕಾಗಿದೆ.
