ಉದಯವಾಹಿನಿ,ಸಿಂಧನೂರು: ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ತುರವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ಪೋಸ್ಟರ್ ಪ್ರದರ್ಶನ ನೀಡಲಾಯಿತು.

ನಂತರ ಮಾತನಾಡಿದ ಡಾ.ಮಂಜುನಾಥ ಅವರು ಮನುಷ್ಯನ ಮನಸ್ಸು ಮತ್ತು ದೇಹ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಏಕೆಂದರೆ ದೇಹ ಸದೃಢ ವಾಗಿ ದೇಹದಲ್ಲಿ ಆರೋಗ್ಯಕರವಾಗಿ ನಮ್ಮ ಮನಸ್ಸು ನ ಕಡೆಗೆ ಸೇರಿರುತ್ತದೆ. ಎಂದು ಹೇಳಿದರು 

ಮನುಷ್ಯನಿಗೆ ಯಾವುದೇ ಚಿಂತೆಯಲ್ಲಿ ಕೆಲವು ಒತ್ತಡ ಗಳು ಅತಿ ಹೆಚ್ಚು ಕಂಡು ಬಂದರೆ ನಿದ್ರೆ ಕಡಿಮೆಯಾದರೆ ಮೆದುಳಿನಲ್ಲಿ ಗಡ್ಡೆಗಳು ಮದಕ ವೈಸನಗಳುಗಳು ಸರಿಯಾಗಿ ಆಹಾರ ಸೇವಿಸಿದೆ ಇರುವುದರಿಂದ ಇಂತಹ ಮಾನಸಿಕ ರೋಗಿಗಳ ಕಂಡು ಬರುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಚಿಕಿತ್ಸೆ: ಆಯುರ್ವೇದ ಗ್ರಂಥಗಳಾದ ಚರಕ, ಸುಶ್ರುತ, ವಾಗ್ಟಟರು ಮಾನಸಿಕ ರೋಗಗಳಲ್ಲಿ ಅನೇಕ ಚಿಕಿತ್ಸಾ ಕ್ರಮಗಳನ್ನು ತಿಳಿಸಿದ್ದಾರೆ. ಶಿರೋದಾರ,ನಶ್ಯ ಹಾಗೂ ಪ್ರಾಣಾಯಾಮಗಳು ಮಾನಸಿಕರೋಗಗಳಲ್ಲಿ ಲಾಭಗಳ ಆಗುತ್ತವೆ ಎಂದು ಹೇಳಿದರು. ಈ ವರ್ಷದ ಘೋಷಣೆ ‘ಮಾನಸಿಕ ಆರೋಗ್ಯ ಸಾರ್ವತ್ರಿಕ ಹಕ್ಕು’ ಎಂಬುದಾಗಿದೆ. ಕಾರ್ಯಕ್ರಮದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಪರಮೇಶ್ವರ್,ಯಲ್ಲಮ್ಮ. ಶರಣಬಸವ, ಭಾಗ್ಯಶ್ರೀ, ಕಿರಣ ಹಾಗೂ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು. ತಾಲೂಕ ಆಸ್ಪತ್ರೆ ಸಿಂಧನೂರು : ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಎಮ್ ವಿಶ್ವ ಮಾನಸಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ನಾಗರಾಜ ಕಾಟ್ವಾ ಮಾತನಾಡಿ ಮಾನಸಿಕ ಖಿನ್ನತೆ ಹೊಗಲಾಡಿಸಲು ಒಂದು ತಿಂಗಳು ಅಂತಹವರಿಗೆ ವಿವಿಧ ಚಟುವಟಿಕೆಗಳನ್ನು ಕೊಡಲಾಗುತ್ತದೆ ಅವುಗಳನ್ನು ಪೂರೈಸಿದ ತರುವಾಯ ಆ ಮಾನಸಿಕ ಖಿನ್ನತೆಯಿಂದ ಹೊರ ಬರಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ.ಸಲಾವುದ್ದಿನ್,ಬಸಯ್ಯ, ರಂಗನಾಥ ಗುಡಿ, ಸಂಗನಗೌಡ ಪಾಟೀಲ, ಗೀತಾ ಹಿರೇಮಠ, ಎಫ್.ಎಹಣಗಿ, ಆಶಾ ಕಾರ್ಯಕರ್ತೆಯರಾದ ಮಹಾದೇವಿ, ಮಲ್ಲೇಶ್ವರಿ,ರೇಣುಕಾ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!