
ಉದಯವಾಹಿನಿ,ಸಿಂಧನೂರು : ಸಿಂಧನೂರು ತಾಲ್ಲೂಕುನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡುಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕಿನ ಬಳ್ಳಾರಿ ಮಾರ್ಗದ ಕೆಂಗಲ್ ಬಳಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ. ಹೋರಾಟ ಸಮಿತಿ ಧರಣಿ ಕುರಿತು ಮಾತನಾಡಿದ ಅವರು ದೇಶದಲ್ಲಿ ರೈತರು ಬಗ್ಗೆ ಕೀಳು ಮಟ್ಟದ ಭಾವನೆ ಬಂದಿದೆ.ರೈತರಿಗೆ ಸಂಕಷ್ಟ ಎದುರಾಗಿದೆ ಈಗ ಅಯ್ಯೋ ಪಾಪ.ರೈತ ದೇಶಕ್ಕೆ ಅನ್ನೋ ನೀಡುವಂತೆ ರೈತ ಸಂಕಷ್ಟಕ್ಕೆ ಸಿಲುಕಿದ್ದು. ಈ ರಾಜ್ಯವನ್ನು ಅಳುವ ಸರ್ಕಾರಗಳು ರೈತರ ಸಮಸ್ಯೆಗಳು ಇದ್ದು. ಅವುಗಳನ್ನು ಬಗೆಹರಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ಇಲ್ಲವಾದರೆ ರೈತ ಸಂಘದ ವತಿಯಿಂದ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶದಿಂದ ಎಚ್ಚರಿಸಿದರು. ಈ ಬಾರಿ ಮುಂಗಾರು ಮಳೆ ಸರಿಯಾಗಿ ಬಾರದೇಕೆ ಕಾಲುವೆ ಗೆ ಸಹ ನೀರು ಸಹಿತ ತಡವಾಗಿ ಬಂದಿದ್ದಕ್ಕೆ ಇದರ ಮದ್ಯೆ ಅಧಿಕಾರಿಗಳು ವೈಫಲ್ಯದಿಂದ ಮತ್ತು ಮೇಲ್ಭಾಗದ ರೈತರಹಿತ ಕಾಪಾಡುವ ನಿಟ್ಟಿನಲ್ಲಿ ತಾಲ್ಲೂಕಿಗೆ ಬರಬೇಕಾದ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ ನೀರು ಇಲ್ಲದೆ ಬೆಳೆಗಳು ನಾಶವಾಗಿದೆ. ನದಿ ಬಳಿ ಇರುವ ಗ್ರಾಮಗಳಲ್ಲಿ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ. ಮೇವು ಇಲ್ಲದೆ ರೈತ ಕಷ್ಟ ಎದುರಿಸುವಂತಾಗಿದೆ ಎಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಹಂಚಿನಾಳ ಗೌರವಾಧ್ಯಕ್ಷ ವೆಂಕಟರೆಡ್ಡಿ ರಾಜಲಬಂಡಾ ಬಸವರಾಜ ಕನಸಾವಿ ಅಮರ ಗುಂಡಪ್ಪ ಶಿವನಗೌಡ ಅಡಿವೆಪ್ಪ ಇತರರು ಉಪಸ್ಥಿತರಿದ್ದರು.
