
ಉದಯವಾಹಿನಿ, ಮುದ್ದೇಬಿಹಾಳ ; ಪಟ್ಟಣದ ಬಸ್ ನಿಲ್ದಾಣದಿಂದ ಬಸ್ ಡಿಪೋಗೆ ಅಂಟಿಕೊಂಡು ಗ್ರಾಮದೇವತೆ ಕಟ್ಟೆ ಸೇರಿದಂತೆ ಪಟ್ಟಣದ ತರಕಾರಿ ಮಾರುಕಟ್ಟೆ ಮುಖ್ಯ ಬಜಾರ್ ಗೆ ಸಂಪರ್ಕ ಮಾಡುವ ಒಳರಸ್ತೆ ಸುಧಾರಣೆ ಆಗಬೇಕಿದೆ ಹಲವು ದಶಕಗಳಿಂದ ತಾಲೂಕಿನ ಅನೇಕ ಗ್ರಾಮಗಳಿಂದ ಆಗಮಿಸುವ ಗ್ರಾಮಸ್ಥರು ಬಜಾರ್ ಗೆ ಹೋಗಲು, ಆಸ್ಪತ್ರೆಗೆ ಹೋಗಲು ಬಳಕೆಯನ್ನು ಮಾಡುತ್ತಿದ್ದದ್ದು ಇದೇ ರಸ್ತೆಯನ್ನು ಆದರೆ ಈ ರಸ್ತೆ ಬಸ್ ಡಿಪೋ ಅಂಟಿಕೊಂಡು ಮುಲ್ಲಾ ಆಸ್ಪತ್ರೆಯ ವರಗೆ ಸುಧಾರಣೆ ಕಾಣಬೇಕಿದೆ, ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಎಲ್ಲಾ ಗಲೀಜು ಈ ರಸ್ತೆಯ ಮೇಲೆ ಹರಿದು ಹೋಗುತ್ತದೆ ಈ ಗಲೀಜು ತಿಳಿದುಕೊಂಡು ದಾಟಿಕೊಂಡು ಜನರು ಸಾಗಬೇಕು ಬಸ್ ನಿಲ್ದಾಣ ನಿರ್ಮಾಣಗೂಂಡ ಕಾಲದಿಂದಲೂ ಈ ರಸ್ತೆ ಇದೆ
ಸದ್ಯ ಶೌಚಾಲಯ ಗಲೀಜು ರಸ್ತೆಯಲ್ಲಿ ಹರಿಯದಂತೆ ವ್ಯವಸ್ಥೆ ಆಗಬೇಕು ಮತ್ತು ರಾತ್ರಿ ಸಂಚರಿಸಲು ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಡಬೇಕಿದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ
ಮುದ್ದೇಬಿಹಾಳ ಬಸ್ ನಿಲ್ದಾಣ ಆರಂಭದಿಂದ ಇರುವ ಈ ರಸ್ತೆ ಸುಧಾರಣೆ ಪುರಸಭೆ ಇಲಾಖೆಯವರು ಮಾಡಬೇಕು ಮತ್ತು ವಿದ್ಯುತ್ ವ್ಯವಸ್ಥೆ ಆಗಬೇಕು, ಬಸ್ ನಿಲ್ದಾಣದ ಶೌಚಾಲಯದ ಗಲೀಜು ರಸ್ತೆಯಲ್ಲಿ ಹರಿಯದಂತೆ ಮೊದಲು ತಡೆಗಟ್ಟಬೇಕಿದೆ ಇತ್ತ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಲಕ್ಷ್ಯ ವಹಿಸಬೇಕಿದೆ.
