ಉದಯವಾಹಿನಿ, ಮಾಲೂರು: ಪಟ್ಟಣದ ವೈಟ್ ಗಾರ್ಡನ್ ಬಡಾವಣೆಯಲ್ಲಿ ಭಾನುವಾರ ಸಂಜೆ ರಿಯಲ್ ಎಸ್ಟೇಟ್ ಉದ್ದಿಮೆದಾರ ಜೆಸಿಬಿ ಮುನಿಯಪ್ಪನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ತಲೆಮರಸಿಕೊಂಡಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆ ಮಾಡಿದ ಆರೋಪಿಗಳನ್ನು ಪಟ್ಟಣದ ವೈಟ್‌ಗಾರ್ಡನ್ ನಿವಾಸಿ ಪೊಲೀಸ್ ಎಎಸ್‌ಐ ಮಗ ವಿನೋದ್. ಅಲಿಯಾಸ್ ವಿನು,(೨೭), ಗಾಂಧಿ ವೃತದ ಸುಭಾಷ್ (೨೨) ಎಂದು ಗುರುತಿಸಲಾಗಿದೆ.
ಮೃತ ಮುನಿಯಪ್ಪನ ಬಳಿ ಆರೋಪಿ ಪಟ್ಟಣದ ವೈಟ್‌ಗಾರ್ಡನ್ ಬಡಾವಣೆಯ ನಿವಾಸಿ ಎಎಸ್‌ಐ ಪುತ್ರ ವಿನೋದ್ ಅಲಿಯಾಸ್ ವಿನು ಮತ್ತು ತಂದೆ ಮನೆ ಹಾಗೂ ನಿವೇಶನದ ಅಡ ಇಟ್ಟು ಹಣವನ್ನು ಪಡೆದಿದ್ದಾರೆ. ಹಣ ವಾಪಸ್ ನೀಡದ ಕಾರಣ ಮೃತ ಮುನಿಯಪ್ಪ ಆಗಾಗ ಹಣ ಕೇಳಲು ಆರೋಪಿಯ ಮನೆಯ ಬಳಿ ಹೋಗಿ ಹಣ ವಾಪಸ್ ನೀಡಿ ಇಲ್ಲವಾದಲ್ಲಿ ಮನೆ ನಿವೇಶನ ಬರೆದುಕೊಡುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಆರೋಪಿ ವಿನೋದ್ ಪಟ್ಟಣದ ವೈಟ್ ಗಾರ್ಡನ್ ಬಡಾವಣೆಯ ಶ್ರೀರಂಗಂ ಕಲ್ಯಾಣ ಮಂಟಪದ ಪಕ್ಕದ ರಸ್ತೆಯಲ್ಲಿ ಮೃತ ಮುನಿಯಪ್ಪನಿಗಾಗಿ ತನ್ನ ಸ್ನೇಹಿತ ಸುಭಾಷ್ ನೊಂಡಿಗೆ ಹೊಂಚು ಹಾಕುತ್ತಿದ್ದ ಮುನಿಯಪ್ಪ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಂತೆ ಮುನಿಯಪ್ಪನನ್ನು ಲಾಂಗ್‌ನಿಂದ ಮಾರಣಾಂತಿಕ ಅಲ್ಲೇ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಪಟ್ಟಣದ ಪೊಲೀಸ್ ಇನ್ಸ್ಪೆಕ್ಟರ್ ವಸಂತವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಹಾಗೂ ಡಿಎಸ್‌ಪಿ ಮಲ್ಲೇಶ್ ಅವರ ಮಾರ್ಗದರ್ಶನದಂತೆ ಆರೋಪಿಗಳನ್ನು ಮಾಲೂರು ಹೊಸಕೋಟೆ ರಸ್ತೆಯ ಕೊಳತೂರು ಗೇಟ್ ಬಳಿ ಬಂಧಿಸಿ ಆರೋಪಿಗಳು ಕೊಲೆ ಮಾಡಲು ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿ ಆರೋಪಿಗಳನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
