ಉದಯವಾಹಿನಿ, ಬೆಂಗಳೂರು: ನಗರದ ಸೇಂಟ್ ಫ್ರಾನ್ಸಿಸ್ ಕಾಲೇಜಿನ ಎನ್ ಸಿ ಸಿ ಘಟಕದಿಂದ ನಿನ್ನೆ ಕೋರಮಂಗಲದ ಅಂಚೆ ಕಚೇರಿ ಮೈದಾನದಲ್ಲಿ “ಸ್ವಚ್ಛತಾ ಹಿ ಸೇವಾ ೩.೦ ವಿಶೇಷ ಅಭಿಯಾನ”ವನ್ನು ನಡೆಯಿತು. ಮುಖ್ಯ ಅತಿಥಿಗಳಾಗಿ ಗೋವರ್ಧನ ರೆಡ್ಡಿ, ಕಾಂಗ್ರೆಸ್ ಬ್ಲಾಕ್ ಪ್ರೆಸಿಡೆಂಟ್, ಅವರು ಮೈದಾನದಲ್ಲಿ ಕಸಗೂಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್ ಸಿ ಸಿ ಸ್ವಯಂಸೇವಕರು ಅಂಚೆ ಕಚೇರಿ ಮೈದಾನದಿಂದ ಕೋರಮಂಗಲದ ಸಿಗ್ನಲ್‌ವರೆಗೆ ರಸ್ತೆಗಳನ್ನು ಸ್ವಚ್ಛ ಮಾಡುವುದು, ಬೀದಿ ನಾಟಕ ಪ್ರದರ್ಶನ ಹಾಗೂ ಘೋಷಣೆಗಳನ್ನು ಕೂಗುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಎನ್ ಸಿ ಸಿ ಸ್ವಯಂಸೇವಕರ ಶ್ರಮ ಮತ್ತು ಸಕ್ರಿಯ ಭಾಗವಹಿಸುವಿಕೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು. ಕಾಲೇಜಿನ ನಿರ್ದೇಶಕರಾದ ಬ್ರದರ್ ಪೀಟರ್, ಉಪ ನಿರ್ದೇಶಕರಾದ ಬ್ರದರ್ ಟೈಟಸ್, ಪ್ರಾಂಶುಪಾಲರಾದ ಡಾ. ಆರ್ ಎನ್ ಸುಬ್ಬರಾವ್ ಹಾಗೂ ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಅಮರೇಗೌಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
