ಉದಯವಾಹಿನಿ  ಚಿತ್ರದುರ್ಗ : ಆರೋಗ್ಯಕರ ಜೀವನಶೈಲಿ ಕಣ್ಣುಗಳ ದೃಷ್ಟಿಯನ್ಜು ಕಾಪಾಡುವುದಲ್ಲದೆ ಮಧುಮೇಹ ಮತ್ತು ಇತರ  ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿರುತ್ತದೆ ಹಾಗೆಯೇ ಆರೋಗ್ಯಕರ ಆಹಾರವು ಪದ್ಧತಿಯೂ ಸಹ  ನಮ್ಮ ಕಣ್ಣಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಜಿ.ಒ.ನಾಗರಾಜ್ ತಿಳಿಸಿದರು.
ಜಿಲ್ಲಾ ಪಂಚಾಯತ್ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ , ಜಿಲ್ಲಾ ಅಂಧತ್ವ ನಿಯಂತ್ರಣ ಕಛೇರಿ ಸಹಯೋಗದೊಂದಿಗೆ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಗುರುವಾರ ತಾಲ್ಲೂಕಿನ ಹೋ.ಚಿ.ಬೋರಯ್ಯನಹಟ್ಟಿ ನಿರಾಶ್ರಿತರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ 24ನೇ ವಿಶ್ವ ದೃಷ್ಟಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಣ್ಣಿನ ಆರೋಗ್ಯವನ್ನು ಉತ್ತೇಜಿಸಲು ಮತ್ತು ಕಣ್ಣಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ವಿಟಮಿನ್ ಎ, ಸಿ ಮತ್ತು ಇ ಜೊತೆಗೆ ಸತು ಮತ್ತು ಲುಟೀನ್‌ನಂತಹ ಖನಿಜಗಳಿಂದ ಕೂಡಿದ ಆರೋಗ್ಯಕರ ಆಹಾರವು ಅತ್ಯಗತ್ಯ. ಹಾಗೆಯೇ ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದು ಪಟಾಕಿ ಹೊಡೆಯುವಾಗ ಮುನ್ನೆಚ್ಚರಿಕೆ ವಹಿಸಿ ಕಣ್ಣಿಗೆ ಪಟಾಕಿ ಕಿಡಿ ತಾಗಿದರೆ ಕಣ್ಣುಗಳನ್ನು ಉಜ್ಜಬೇಡಿ. – ಪಟಾಕಿಯಿಂದ ಗಾಯಗೊಂಡ ಕಣ್ಣುಗಳನ್ನು ತೊಳೆಯಬೇಡಿ. – ಕಣ್ಣಿನಲ್ಲಿ ಸಿಲುಕಿಕೊಂಡಿರುವ ವಸ್ತುಗಳನ್ನು ಬಲವಂತವಾಗಿ ಹೊರತೆಗೆಯಲು ಪ್ರಯತ್ನಿಸಬೇಡಿ. ಹೆಚ್ಚು ವಿಳಂಬ ಮಾಡದೆ ಕಣ್ಣಿನ ವೈದ್ಯರನ್ನು ಭೇಟಿಯಾಗಿ. ಎಂದು ಕಣ್ಣಿ ಆರೋಗ್ಯ ಕುರಿತು ಮಾಹಿತಿ ನೀಡಿದರು.ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಶಿಲ್ಪ ಮಾತನಾಡಿ “ವಿಶ್ವ ದೃಷ್ಟಿ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೇ ಗುರುವಾರದಂದು ಆಚರಿಸಲಾಗುತ್ತದೆ. ಕುರುಡುತನ ಸೇರಿದಂತೆ ವಿವಿಧ ರೀತಿಯ ದೃಷ್ಟಿಹೀನ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಈ ದಿನವನ್ನು ಮೀಸಲಿಡಲಾಗಿದೆ. ಅಧ್ಯಯನಗಳ ಪ್ರಕಾರ, ಜಾಗತಿಕವಾಗಿ ಸುಮಾರು 1 ಶತಕೋಟಿ ಜನರು ವಿವಿಧ ರೀತಿಯ ದೃಷ್ಟಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಎಲ್ಲಾ ದೃಷ್ಟಿ ಸಮಸ್ಯೆಗಳನ್ನು ಸರಿಯಾದ ಶಿಕ್ಷಣ ಮತ್ತು ಅರಿವಿನ ಮೂಲಕ ತಡೆಗಟ್ಟಬಹುದು ಅಥವಾ ಪರಿಹರಿಸಬಹುದು. ಎಂದು ವಿಶ್ವ ದೃಷ್ಟಿ ದಿನದ ಮಹತ್ವವನ್ನು ತಿಳಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಯೋಗ ತರಬೇತುದಾರ ರವಿ ಕೆ.ಅಂಬೇಕರ್ ನಿರಾಶ್ರಿತರ ಕೇಂದ್ರದ ಸದಸ್ಯರಿಗೆ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಯೋಗ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ. ಜಿಲ್ಲಾ ಆಸ್ಪತ್ರೆಯ ನೇತ್ರಾಧಿಕಾರಿ ಕೆ.ಸಿ.ರಾಮು, ಸಮುದಾಯ ಆರೋಗ್ಯ ಶುಸ್ರುಷಣಾಧಿಕಾರಿ ಶ್ರೀಮತಿ ರೂಪ, ನಿರಾಶ್ರಿತರ ಕೇಂದ್ರದ ಸಿಬ್ಬಂದಿಗಳಾದ ಲಕ್ಷ್ಮೀ, ದೇವರಾಜ್, ವಿಜಯಕುಮಾರ್, ಗಗನ್, ಮಂಜುನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!