
ಉದಯವಾಹಿನಿ ದೇವದುರ್ಗ: ಈಶಾನ್ಯ ಪದವಿದರ ಚುನಾವಣೆ ಅಂಗವಾಗಿ ನೂತನವಾಗಿ ಮತದಾರ ಪಟ್ಟಿ ಸಿದ್ಧಪಡಿಸಬೇಕಾಗಿರುವುದರಿಂದ ಅರ್ಹ ಮತದಾರರಿಂದ ಮತದಾರ ಪಟ್ಟಿಗೆ ಸೆರ್ಪಡೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ ತಿಳಿಸಿದ್ದಾರೆ.ಭಾರತ ಚುನಾವಣಾ ಆಯೋಗವು ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ,ಮತದಾರರ ಸಹಾಯಕ ನೋಂದಣಾಧಿಕಾರಿಯನ್ನಾಗಿ ಮಾನ್ಯರು ನೇಮಿಸಿರುತ್ತಾರೆ.ಅರ್ಹತಾ ದಿನಾಂಕ 01.11.2023 ಕ್ಕೆ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯು ನೂತನವಾಗಿ ಸಿದ್ಧಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿರುತ್ತದೆ.
ಭಾರತ ಚುನಾವಣಾ ಆಯೋಗವು ದಿನಾಂಕ 09.08.2023ರ ಪತ್ರದನ್ವಯ ಕರ್ನಾಟಕ ಈಶಾನ್ಯ ಪದವಿಧರರ ಮತಕ್ಷೇತ್ರದ ಮತದಾರರ ಪಟ್ಟಿಯು ಹೊಸದಾಗಿ ಸಿದ್ಧಪಡಿಸಲಾಗುತ್ತಿರುವುದರಿಂದ ಈ ಹಿಂದಿನ
ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ 18 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿರುತದೆಂದು ನಿರ್ದೇಶನ ನೀಡಿರುತ್ತಾರೆ. ಅಗತ್ಯ ದಾಖಲಾತಿಗಳು:- ಮತದಾರ ಗುರುತಿನ
ಚೀಟಿ, ಆಧಾರ ಕಾರ್ಡ,ಪಡಿತರ ಚೀಟಿ, ಪದವಿ ಅಂತಿಮ ವರ್ಷದ ಅಂಕಪಟ್ಟಿ, ಪಾಸಿಂಗ್ ಪ್ರಮಾಣ ಪತ್ರ, 2ಭಾವಚಿತ್ರ ಅರ್ಜಿ ಸೇರಿ ಎಲ್ಲಾ ದಾಖಲಾತಿಗಳಿಗೆ ಗೇಜಿಟೆಡ್ ಅಫಿಸರ್ ಸಹಿಯೊಂದಿಗೆ ಕಛೇರಿಗೆ ನೀಡಬೇಕು, ಈಶಾನ್ಯ ಪದವೀಧರರ ಮತ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ಈ ಕೆಳಗಿನಂತೆ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ವೇಳಾಪಟ್ಟಿ ಈ ರೀತಿ ಇದೆ ಅರ್ಜಿ ನಮೂನೆ 18 ರಲ್ಲಿ ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕ ಮತ್ತು ದಿನ 06.11.2023 ಸೋಮವಾರ ಆಗಿದೆ.ಕರಡು ಮತದಾರರ ಪಟ್ಟಿ ಪ್ರಕಟಣೆ ದಿನಾಂಕ ಮತ್ತು ದಿನ23.11.2023 (ಗುರುವಾರ), ಹಕ್ಕು ಮತ್ತು ಆಕ್ಷೇಪಣೆಗಳಿಗಾಗಿ ನಿಗದಿಪಡಿಸಿದ ಅವಧಿ 09.12.2023 (ಶನಿವಾರ), ಅಂತಿಮ ಮತದಾರರ ಪಟ್ಟಿ ದಿನಾಂಕ ಮತ್ತು ದಿನ 30.12.2023 ರಂದು ಪ್ರಕಟಿಸಲಾಗುವುದು. ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹಾಗೂ ಚುನಾವಣಾ ಸಿಬ್ಬಂದಿ ಉಮೇಶ್ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ..
