ಉದಯವಾಹಿನಿ ಇಂಡಿ : ಪಟ್ಟಣದಲ್ಲಿ ಕಣ್ಣು ಕಾಣುಸುವಷ್ಟು ದೂರಕ್ಕೆ ಕಂಗೊಳಿಸುವ ಭಗವಾಧ್ವಜಗಳು,ಕೇಸರಿಶಾಲು,ಮುಂಡಾಸು ಧರಿಸಿದ ಕಾರ್ಯಕರ್ತರು,ಸಾಲು ಸಾಲು ಪೇಟಾಧಾರಿ ಮಹಿಳೆಯರು ಬ್ಯಾಂಡ ನೃತ್ಯ ತಂಡಗಳು ಇಂಡಿಯಲ್ಲಿ ಕೇಸರಿಮಯ ಗೊಳಿಸಿದ್ದವು. ವಿಶ್ವ ಹಿಂದು ಪರಿಷತ್ತು 60 ನೇ ವರ್ಷಕ್ಕೆ ಪ್ರಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಬಜರಂಗದಳ ದೇಶದಾದ್ಯಂತ ಸೆ.30 ರಿಂದ ಅಕ್ಟೋಬರ್ 16 ರವರೆಗೆ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸಿದ್ದು, ಬುಧವಾರ ರಥಯಾತ್ರೆ ಸಂಜೆ ಇಂಡಿ ಪಟ್ಟಣಕ್ಕೆ ಆಗಮಿಸಿತು.ರಥಯಾತ್ರೆಗೆ ಹಿಂದೂಪರ ಸಂಘಟನೆಗಳ ನೂರಾರು ಕರ‍್ಯಕರ್ತರು ಜೈಶ್ರೀರಾಮ್, ಜೈ ಜೈ ಶ್ರೀರಾಮ್ ಜಯಘೋಷ ಹಾಕುತ್ತ ಕಾಸುಗೌಡ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಸ್ವಾಗತಿಸಿ ಪಟ್ಟಣದ ಬಸವರಾಜೇಂದ್ರ ದೇವಸ್ಥಾನದಿಂದ ಮೆರವಣ ಗೆ ಪ್ರಾರಂಭಿಸಿದರು.  ಮಹಾವೀರ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ತ ಪ್ರಾಂತ ಪ್ರಮುಖ ಪುಂಡಲೀಕ ದಳವಾಯಿ,ಶ್ರೀಮಂತ ದುದ್ದಗಿ,ನೇತಾಜಿ ಪವಾರ,ಸುನೀಲ ಜಮಖಂಡಿ ಮಾತನಾಡಿ  ವಿಶ್ವ ಹಿಂದು ಪರಿಷತ್ತ  ಉತ್ತರ ಕರ್ನಾಟಕದ ಪ್ರಾಂತದ ಸಾವಿರಾರು ವರ್ಷಗಳಿಂದಲೂ ದೇಶ ಪರಕೀಯರ ದಾಳಿಗಳನ್ನು ಶೌರ್ಯ, ಪರಾಕ್ರಮಗಳ ಮೂಲಕ ದಿಟ್ಟತನದಿಂದ ಸಮರ್ಪಕವಾಗಿ ಎದುರಿಸಿದೆ. ಸನಾತನ ಧರ್ಮ, ಪವಿತ್ರ ಭರತಭೂಮಿಯ ಸಂರಕ್ಷಣೆಗೆ ಅನೇಕ ವೀರರ ಬಲಿದಾನವಾಗಿದೆ. ಅವರೆಲ್ಲರ ತ್ಯಾಗ, ಬಲಿದಾನಗಳಿಂದಾಗಿ ಸನಾತನಧರ್ಮ ಸುರಕ್ಷಿತವಾಗಿ ಇಲ್ಲಿಯವರೆಗೂ ತಲುಪಿದ್ದು, ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆ ಪ್ರತಿ ಹಿಂದುವಿನ ಮೇಲಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಲವ್‌ಜಿಹಾದ್, ಮತಾಂತರ, ಗೋಹತ್ಯೆ ವಿರುದ್ಧವೂ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಸಂತೋಷ ನಾಯಕ, ನ್ಯಾಯವಾದಿ ಮಲ್ಲಿಕಾರ್ಜುನ ಬಿರಾದಾರ, ಪ್ರಕಾಶ ಬಿರಾದಾರ, ನೇತಾಜಿ ಪವಾರ, ಅನೀಲಗೌಡ ಬಿರಾದಾರ, ಸೋಮು ನಿಂಬರಗಿಮಠ, ಅಶೋಕ ಅಕಲಾದಿ, ಮಹಾಂತೇಶ ಪಾಟೀಲ, ಹೆಗ್ಗಪ್ಪ ಗುಡ್ಲ, ರಾಮಸಿಂಗ ಕನ್ನೊಳ್ಳಿ, ಶ್ರೀಧರ ಕ್ಷತ್ರಿ, ಶಂಕರ ಹಲವಾಯಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!