
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಾ ಮಟ್ಟದ ಪಿಕಾರ್ಡ ಬ್ಯಾಂಕ್ ಗಳು ಶೇ.70ಕ್ಕಿಂತ ಹೆಚ್ಚು ಪ್ರತಿಶತಃ ಲಾಭದಾಯಕ ಇದ್ದಲ್ಲಿ ರಾಜ್ಯ ಸಹಕಾರ ಸಂಘದ ವತಿಯಿಂದ ಸುಮಾರು 3ಕೋಟಿಯಷ್ಟು ಸಾಲ ಸೌಲಭ್ಯ ನೀಡಲಾಗುತ್ತೆ ಹಾಗೂ ಶೇ.50ರಿಂದ 70ಪ್ರತಿಶತಃ ಕೆಳಗೆ ಇರುವ ಲಾಭದಾಯಕ ಬ್ಯಾಂಕ್ ಗಳಿಗೆ 60 ರಿಂದ 1ಕೋಟಿಯವರೆಗೆ ಸಾಲಸೌಲಭ್ಯ ನೀಡಲಾಗುವುದು ಎಂದು ಪಿಕಾರ್ಡ ಕಲಬುರ್ಗಿ ಬೀದರ ಜಿಲ್ಲಾ ನಿರ್ದೇಶಕ ಮಲ್ಲಿಕಾರ್ಜುನ ಮಾಳಶೇಟ್ಟಿ ಹೇಳಿದರು. ಪಟ್ಟಣದ ಚಂದಾಪೂರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕನ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಹೆಚ್ಚಿನ ಶಬಿಡಿಪಿ ಸಾಲ ನೀಡಿ ವಸೂಲಾತಿಗೆ ಗಮನಹರಿಸಬೇಕು.ಈಗಾಗಲೇ 20ಲಕ್ಷದವರೆಗೆ ಬಿಡಿಪಿ ಸಾಲ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಲ ನೀಡಿ ವಸೂಲಾತಿಗೆ ಗಮನಹರಿಸಬೇಕು,ಈಗಾಗಲೇ ಚಿಂಚೋಳಿ ಪಿಕಾರ್ಡ ಬ್ಯಾಂಕ್ ನಷ್ಟದಲ್ಲಿದ್ದು ಬ್ಯಾಂಕ್ ಅನ್ನು ಪುನಚ್ಛೇತನಗೊಳಿಸಲು ರಾಜ್ಯ ಸಹಕಾರ ಸಂಘದಿಂದ 30ಲಕ್ಷ ರೂ.ಸಾಲಸೌಲಭ್ಯ ನೀಡಲಾಗಿದೆ,ಎಲ್ಲಾ ನಿರ್ದೇಶಕರು ಅಧ್ಯಕ್ಷ ಉಪಾಧ್ಯಕ್ಷರು ಠೇವಣಿ ಹಣ ಜಮಾ ಮಾಡುವಂತೆ ಸಭೆಯಲ್ಲಿ ಹೇಳಿದರು. ಪಿಕಾರ್ಡ ಬ್ಯಾಂಕನಿಂದ ರೈತರಿಗೆ ಟ್ರಾಕ್ಟರ್,ಪ್ಯಾನಸಿಂಗ್,ಬೆಳೆಸಾಲ, ಕುರಿಸಾಗಣಿಕೆ,ಹೈನುಗಾರಿಕೆಗಾಗಿ ಅನುಕೂಲ ಕಲ್ಪಿಸಿಕೊಡಲು ಪ್ರತಿಶತಃ 3ರ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುವುದು,ಗ್ರಾಮೀಣ ಉಗ್ರಾಣಕ್ಕೆ ಪ್ರತಿಶತಃ 07ರ ಬಡ್ಡಿದರದಲ್ಲಿ ಸಾಲ ವಿತರಿಸಲಾಗುವುದು.ಎಲ್ಲಾ ಸಾಲ ಸೌಲಭ್ಯಗಳಿಗೆ ಸಬ್ಸಿಡಿ ದರದಲ್ಲಿ 1ಲಕ್ಷದಿಂದ 15ಲಕ್ಷದವರೆಗೆ ಸಾಮಾನ್ಯ ವರ್ಗಕ್ಕೆ ಪ್ರತಿಶತಃ 25ರಷ್ಟು ಸಬ್ಸಿಡಿ, ಪರಿಶೀಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡ ವರ್ಗಗಳಿಗೆ ಪ್ರತಿಶತಃ 33.3ರಷ್ಟು ಸಬ್ಸಿಡಿ ನೀಡಲಾಗುತ್ತದೆ.ರೈತರು ಪಿಕಾರ್ಡ ಬ್ಯಾಂಕನಿಂದ ಸಾಲಸೌಲಭ್ಯ ಪಡೆದು ಆರ್ಥಿಕವಾಗಿ ಬಲಿಷ್ಟರಾಗಿ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದರು.ಪಿಕಾರ್ಡ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಅಜಯ ಪಾಟೀಲ ಮಾತನಾಡಿ ಎನ್.ಎಫ್.ಎಸ್ ಯೋಜನೆಯಲ್ಲಿ ಪಿಕಾರ್ಡ ಬ್ಯಾಂಕ್ 12ಲಕ್ಷ ಸಾಲ ಬಾಕಿವಿದೆ 32.42ಲಕ್ಷ ಅಸಲು ಬಡ್ಡಿ ಸೇರಿಕೊಂಡು 2.18ಕೋಟಿ ರೂಪಾಯಿ ವಸೂಲಿ ಬಾಕಿವಿದೆ.ಈ ಸಾಲವನ್ನು ವಸೂಲಾತಿ ಆಗುವುದಿಲ್ಲಾ ಈಗಾಗಲೇ ರಾಜ್ಯ ಸಹಕಾರ ಸಂಘದ ಕಛೇರಿಗೆ ಅನೇಕ ಪತ್ರಗಳು ಬರೆದು ಎನ್.ಎಫ್.ಎಸ್ ಸಾಲವನ್ನು ಕೈಬಿಡುವಂತೆ ಹೇಳಲಾಗಿದ್ದು ಇದರಿಂದ ಬ್ಯಾಂಕಗೆ ಲಾಭದತ್ತ ಪ್ರತಿಶತಃ ತೋರಿಸಲು ತೊಂದರೆ ಆಗುತ್ತಿದೆ.ಕಲಬುರ್ಗಿ ಸಹಕಾರ ಇಲಾಖೆಯ ಉಪ ವಿಭಾಗದಲ್ಲಿ 41ಬ್ಯಾಂಕಗಳಿದ್ದು ಅದರಲ್ಲಿ 12ಬ್ಯಾಂಕ್ ಗಳು ಸೇರಿದಂತೆ ಚಿಂಚೋಳಿ ಪಿಕಾರ್ಡ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ,ಎಲ್ಲಾ ನಿರ್ದೇಶಕರು ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇರೆಸಬಾರದು,ಪಕ್ಷಪಾತ ಮಾಡಿದರೆ ಸಹಕಾರ ಕ್ಷೇತ್ರಗಳು ಹಾಳಾಗುತ್ತವೆ ಎಂದರು. ಪಿಕಾರ್ಡ ಬ್ಯಾಂಕ್ ಅಧ್ಯಕ್ಷೆ ಚಂದ್ರಕಲಾ ಲಿಂಗಶೇಟ್ಟಿ ತಟ್ಟೆಪಳ್ಳಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಅಮರಜೀವನ ಯಾಕಾಪೂರ ಮತ್ತು ಜಗದೀಶಸಿಂಗ್ ಠಾಕೂರ್ ಶ್ರೀಹರಿ ಕಾಟಾಪೂರ ಮಾತನಾಡಿದರು.
ವಿನಯಕುಮಾರ ಚಿಪಾತಿ ಸ್ವಾಗತಿಸಿದರು,ಬ್ಯಾಂಕ್ ವ್ಯವಸ್ಥಾಪಕ ನಾಗಣ್ಣ ಯಲ್ದೆ ನಿರೂಪಿಸಿದರು,ಚಂದ್ರಕಾಂತ ರಾಠೋಡ್ ವಂದಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬೆಳಕೆರಿ,ಹಣಮಂತರಾವ,ನಾಗರೆಡ್ಡಿ,ಗೋ ಪಾಲರೆಡ್ಡಿ,ಕಾಶಿನಾಥ ಹೊಡೆಬೀರನಳ್ಳಿ,ಶರಣಗೌಡ,ಸುಭಾಷ್ ಮಂತ್ರಿ,ಸುಜಾತ ಲಾಲರೆಡ್ಡಿ,ಮಹಾದೇವಪ್ಪ,ದಶರಥ,ಅನೇ ಕರಿದ್ದರು.
