
ಉದಯವಾಹಿನಿ,ಚಿಂಚೋಳಿ: ವಕೀಲರ ಸಂಘದ 2023-25ರ ಅಧ್ಯಕ್ಷರು ಪದಾಧಿಕಾರಿಗಳ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮಂತ ಕಟ್ಟಿಮನಿ ಅವರು 11ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ವಿಶ್ವನಾಥ ಬೆನಕಿನ ತಿಳಿಸಿದ್ದಾರೆ. ಪಟ್ಟಣದ ವಕೀಲ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗಭೂಷಣ ಹುಲಗುಂಡಿ,ಸಂಜುಕುಮಾರ ಮೇತ್ರಿ,ರಾಜೇಂದ್ರಕುಮಾರ,ಸುದರ್ಶನ ಬಿರಾದಾರ,ಶ್ರೀಮಂತ ಕಟ್ಟಿಮನಿ,ನಂದಿಕುಮಾರ ಪಾಟೀಲ್ ಸೇರಿದಂತೆ 6ಜನ ನಾಮಪತ್ರ ಸಲ್ಲಿಸಿದರು,ಆದರೆ ಸದರ್ಶನ ಬಿರಾದಾರ ಹಾಗೂ ಶ್ರೀಮಂತ ಕಟ್ಟಿಮನಿ ಮದ್ಯೆ ನೇರ ಪೈಪೋಟಿಯಿಂದ ಸುದರ್ಶನ ಬಿರಾದಾರ 42ಮತಗಳು ಪಡೆದರೆ ಶ್ರೀಮಂತ ಕಟ್ಟಿಮನಿ 53ಮತಗಳು ಪಡೆದು 11ಮತಗಳಿಂದ ಗೆಲುವು ಸಾಧಿಸಿದ್ದರು.
ಉಪಾಧ್ಯಕ್ಷರಾಗಿ ಜಗನ್ನಾಥ ಗಂಜಗಿರಿ,ಪ್ರಧಾನ ಕಾರ್ಯದರ್ಶಿಯಾಗಿ ಗುಂಡಪ್ಪ ಗೋಖಲೆ,ಸಹ ಕಾರ್ಯದರ್ಶಿ ಸುದರ್ಶನ ಸಂತಾಳ ಜಯಶಾಲಿಯಾದರೆ ಖಜಾಂಚಿಯಾಗಿ ಪ್ರವೀಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆ ನಂತರ ಸಂಘದ ವಕೀಲರು ಜಯಶಾಲಿಯಾದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಟ್ಟಿ ಜಾಧವ,ಶರಣುಪಾಟೀಲ,ಮಲ್ಲಿಕಾರ್ಜುನ,ವಿ ಜಯಕುಮಾರ,ವೈಜೀನಾಥ ದಾದಿ,ರಾಜು ರೇವನೂರ,ಇರ್ಫಾನ್ ಮಾಲಿಪಟೇಲ,ಸಂತೋಷ ಪಾಟೀಲ್,ಶಿವಶರಣಪ್ಪ ಜಾಪಟ್ಟಿ,ಶ್ರೀನಿವಾಸ ಬಂಡಿ,ಲಕ್ಷ್ಮಣ ಆವುಂಟಿ,ಸೂರ್ಯಾಕಾಂತ,ಹಣಮಂತ,ಮಲ್ಲಿ ಕಾರ್ಜುನ ಸುಕಂದ,ಜಗನ್ನಾಥ,ದೀಲಿಪ ಚವ್ಹಾಣ,ನರೇಂದ್ರ,ಶಂಕರ ರಾಠೋಡ್,ಸಿದ್ರಪ್ಪ,ದೇವೀಂದ್ರಪ್ಪಾ, ರಾಜಶೇಖರ ತೋಟದ,ಸಾಬಣ್ಣ,ಶಾಮರಾವ,ಮಾಣಿಕರಾವ,ಸು ನೀಲಕುಮಾರ,ಮಾಣಿಕ ಗುಲಗುಂಜಿ,ವೀರಶೇಟ್ಟಿ,ಶಶಿಕಾಂತ,ಗಿ ರಿರಾಜ,ರಾಮಲಿಂಗ,ಗುರುನಾಥ,ಅನೇಕ ವಕೀಲರು ಇದ್ದರು.
