ಉದಯವಾಹಿನಿ ಪೀಣ್ಯ ದಾಸರಹಳ್ಳಿ:  ಈಗಿನ ಕಾಲದಲ್ಲಿ  ಯಾವುದೇ ಸಮಾಜ ಮತ್ತು ಸಮುದಾಯ ಬೆಳೆಯ ಬೇಕಾದರೆ ಮನುಷ್ಯನ ಹೃದಯವಂತಿಕೆ ಉದಾರವಾಗಿಬೇಕು ಎಂದು ನೆಲಮಂಗಲ ಕ್ಷೇತ್ರದ ಕೆಂಪಲಿಂಗನಹಳ್ಳಿ ದೇವಾಂಗ ಸಮಾಜದ ಶಾಖಾ ಮಠದ  ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ಹೇಳಿದರು.
ಈ ಒಂದು ನೆಲಮಂಗಲ ಹೊರವಲಯದಲ್ಲಿ ದೇವಾಂಗ ಸಮುದಾಯದ ಭವನಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಸಮಾರಂಭ ಕಾರ್ಯ ಕ್ರಮದ ದಿವ್ಯ ಸಾನಿಧ್ಯ ವಹಿಸಿ ಈ ಪುಣ್ಯ ಕಾರ್ಯಕ್ಕೆ ಪರೋಕ್ಷವಾಗಿ ಎಲ್ಲರೂ ಸಹಕರಿಸಿದ ಗಣ್ಯರಿಗೆ ಮತ್ತು ಮಠದ ಭಕ್ತರಿಗೆ  ಸನ್ಮಾನಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಮುದಾಯಗಳು ಅಭಿವೃದ್ಧಿ ಮತ್ತು ಏಳಿಗೆಯಾಗಬೇಕಾದರೆ ಸಮಾಜದ ಶ್ರೀಗಳ ಆಶೀರ್ವಾದ ಮತ್ತು ಅವರ ಶ್ರಮ ಸಮಾಜಕ್ಕೆ ಅಪಾರವಾದದ್ದು ಶ್ರೀಗಳ ಸನ್ನಿಧಿಯಲ್ಲಿ ಇಂತಹ ಭವ್ಯ ಮತ್ತು ಬೃಹತ್ ಭವನ  ನಿರ್ಮಾಣ ಮಾಡಿದ್ದು ನೋಡಿ ತುಂಬಾ ಖುಷಿಯಾಯ್ತು ಎಂದು ಲಗ್ಗೆರೆ ಕಾಂಗ್ರೆಸ್ ಪ್ರಭಾವಿ ನಾಯಕ ಲಗ್ಗೆರೆ ನಾರಾಯಣ ಸ್ವಾಮಿ ಸಮಾರಂಭದಲ್ಲಿ ಭಾಗವಹಿ ಅವರು  ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಟ್ರಸ್ಟ್  ಅಧ್ಯಕ್ಷ ಪಿ ಆರ್ ಗಿರಿಯಪ್ಪ, ಹನುಮಂತಯ್ಯ, ಇಸ್ರೋ ವಿಜ್ಞಾನಿ ಕಲ್ಪನ ಅರವಿಂದ್, ಡಾ.ಜಿ ರಮೇಶ್ ಐಪಿಎಸ್,ಡಿಐಜಿ, ಡಾ.ಡಿ ವೆಂಕಟೇಶ್ರನ್ ಡೆಪ್ಯೂಟಿ ಹೈ ಕಮೀಷನರ್ ಶ್ರೀಲಂಕಾ, ಭೀಮಣ್ಣ  ಸೇರಿದಂತೆ ದೇವಾಂಗ ಸಮಾಜದ ಹಿರಿಯರು  ಮುಖಂಡರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!