ಉದಯವಾಹಿನಿ ಕೋಲಾರ : ವಿದ್ಯಾರ್ಥಿಗಳು ಶ್ರಮಪಟ್ಟು ವ್ಯಾಸಂಗ ಮಾಡಿದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಅದೇ ರೀತಿಯಲ್ಲಿ ಸಮುದಾಯವು ಒಗ್ಗಟ್ಟಿನಿಂದ ಇದ್ದರೆ ಮಾತ್ರವೇ ಸರಕಾರದಿಂದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ರಾಜ್ಯ ಮಗ್ಗದ‌ವರ ಸಂಘದ ಅಧ್ಯಕ್ಷ ಎಸ್.ವಿ ಯೋಗೇಶ್ ತಿಳಿಸಿದರು.ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮಗ್ಗದವರ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ 2023 ನೆಯ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಬಂಧುಗಳಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮುದಾಯವು ಮನಸ್ಸು ಮಾಡಿದರೆ ರಾಜಕೀಯ ಚಿತ್ರಣವನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದಾರೆ ಆದರೆ ನಮ್ಮಲ್ಲಿ ಒಗ್ಗಟ್ಟು ಕೊರತೆ ಇದೆ ಮೊದಲು ನಾವು ಒಗ್ಗಟ್ಟಿನಿಂದ ಸಂಘಟಿತರಾಗಬೇಕು ನಾವು ಪ್ರತಿಯೊಂದು ಕ್ಷೇತ್ರದಲ್ಲಿ ನಾವು ಇದ್ದು ಸರ್ಕಾರಿ ಯೋಜನೆಗಳನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಬೇಕಾಗಿದೆ ಎಂದರು.
ಸಮಾಜದಲ್ಲಿ ಬಹುತೇಕ ಮಹನೀಯರು ನಮ್ಮ ಸಮುದಾಯದಿಂದ ಬಂದವರು ಎಂಬ ಹೆಮ್ಮೆ ಇದೆ ಹಿರಿಯರು ಹೇಳಿಕೊಟ್ಟಂತಹ ಮೌಲ್ಯಗಳು ಕಳೆದು ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಬದಲಾವಣೆ ಮಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಮಾಜದ ಬದಲಾವಣೆ, ಅಭಿವೃದ್ಧಿಯಲ್ಲಿ ಯುವ ಪೀಳಿಗೆಯ ಪಾತ್ರ ಮಹತ್ವದ್ದಾಗಿದ್ದು ಪ್ರತಿಯೊಬ್ಬರು ಮಾನವೀಯತೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಸಮುದಾಯದ ಪೋಷಕರು ಆಸಕ್ತಿ ವಹಿಸುವ ಜೊತೆಗೆ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಗ್ಗದವರ ಸಂಘದ ಅಧ್ಯಕ್ಷ ವಿ.ಶ್ರೀರಾಮ ಮಾತನಾಡಿ ಸಂಘವು 2017 ರಲ್ಲಿ ಪ್ರಾರಂಭ ಮಾಡಿದ್ದು ಮಗ್ಗದ ಸಮುದಾಯವನ್ನು ಒಂದು ಕುಟುಂಬದ ರೀತಿಯಲ್ಲಿ ಬೆಳೆಸಿಕೊಂಡು ಬರಲಾಗಿದೆ ಸಾಧನೆ ಮಾಡಿದವರನ್ನು ಗುರಿತಿಸಿ ಗೌರವಿಸಿದರೆ ಅವರು ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮ ಸಿದ್ದಪಡಿಸಿದಾಗ ಕೇವಲ 50 ವಿಧ್ಯಾರ್ಥಿಗಳು ಅರ್ಜಿಗಳನ್ನು ಕೊಟ್ಟರು ಇವತ್ತು 200 ವಿಧ್ಯಾರ್ಥಿಗಳು ಇದ್ದಾರೆ ಮುಂದಿನ ವರ್ಷ ದೊಡ್ಡ ಮಟ್ಟದಲ್ಲಿ ಸುಮಾರು 500 ವಿಧ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ ಸಮುದಾಯದ ಸಹಕಾರ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಗ್ಗದವರ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ವೇದಿಕೆಯಲ್ಲಿ ಮಗ್ಗದವರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ್, ರಾಜ್ಯ ಮಹಿಳಾ ಪ್ರತಿನಿಧಿ ಹೇಮಾಮಾಲಿನಿ, ರಾಜ್ಯ ಮುಖಂಡರಾದ ಹೊಸಕೋಟೆ ಯೇಸು ಕೃಷ್ಣ, ಮಾಸ್ತಿ ಜಗನ್ನಾಥ, ಶ್ರೀನಿವಾಸ್, ಮಂಜುನಾಥ್ ಆನಂದ ಮೂರ್ತಿ ಶಾಲೆಯ ಎಸ್.ಮುನಿಯಪ್ಪ, ಮುಖಂಡರಾದ ನಂಜುಂಡಪ್ಪ, ಚಂದ್ರಪ್ಪ, ಜೆಡಿಎಸ್‌ ಮಂಜುನಾಥ್, ನಾರಾಯಣಸ್ವಾಮಿ, ರಾಜೇಶ್, ಕರವೇ ಸೋಮು, ಶ್ರೀನಿವಾಸ್, ಕೆ.ಟಿ ನಾಗರಾಜ್, ಸೊಣ್ಣಪ್ಪ, ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!