
ಉದಯವಾಹಿನಿ : ನಿನ್ನೆ ನಡೆದ ಬಿಗ್‌ಬಾಸ್ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದ ನಂತರ ಡ್ರೋನ್ ಪ್ರತಾಪ್ ಪರ ನೆಟ್ಟಿಗರು ಬೆಂಬಲ ಸೂಚಿಸುತ್ತಿದ್ದಾರೆ. ಎಲ್ಲಾ ಸ್ಪರ್ಧಿಗಳು ಪ್ರತಾಪ್ ಅವರನ್ನು ಹರಕೆಯ ಕುರಿ ತರ ನೋಡಿದ ರೀತಿಗೆ ಪ್ರೇಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಅಲ್ಲದೆ ಕಿಚ್ಚ ಸುದೀಪ್ ಡ್ರೋನ್ ಪ್ರತಾಪ್ ಪರ ಮಾತನಾಡಿದ್ದು, ಕರುನಾಡಿನ ಜನರಿಗೆ ಇಷ್ಟವಾದಂತಿದೆ. ಹೌದು.. ಬಿಗ್ ಬಾಸ್ ಕನ್ನಡ ಸೀಸನ್ 10 ರ ಮೊದಲ ವಾರ ಮುಗಿದಿದೆ. ಸಿಕ್ಕಾಪಟ್ಟೆ ಮನರಂಜನೆ ಜೊತೆ ತಮ್ಮ ನೆಚ್ಚಿನ ಸ್ಪರ್ಧಿಗಳ ನಿಜರೂಪವನ್ನು ಪ್ರೇಕ್ಷಕರು ತಿಳಿದುಕೊಳ್ಳುತ್ತಿದ್ದಾರೆ. ಅಲ್ಲದೆ, ಡ್ರೋನ್ ಪ್ರತಾಪ್ ಅವರನ್ನು ದೊಡ್ಮನೆ ಮಂದಿ ನಡೆಸಿಕೊಂಡ ರೀತಿಗೆ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಮುಖ್ಯವಾಗಿ ಭಾಗ್ಯಶ್ರೀ, ತುಕಾಲಿ ಸಂತು, ಸ್ನೇಹಿತ್ ಮಾತಿನಿಂದ ಡ್ರೋನ್ ಪ್ರತಾಪ್ ಕಣ್ಣೀರು ಹಾಕುವಂತಾಯಿತು. ಮಾನವೀಯತೆ ಮೆರೆತು ಊಟ ಕೊಟ್ಟ ಪ್ರತಾಪ್ ಬೆಂಬಲಕ್ಕೆ ಭಾಗ್ಯಶ್ರೀ ನಿಲ್ಲಲೇ ಇಲ್ಲ, ಎಲ್ಲರನ್ನ ನಗಿಸಲು ತುಕಾಲಿ ಸಂತೋಷ್ ಪ್ರತಾಪ್ ಅವರನ್ನು ಹೀಯಾಳಿಸಿದ್ದರು. ಸ್ನೇಹಿತ್ ಅಂತೂ ಎಗರಾಡಿದ್ದರು.ಇದನ್ನೇಲ್ಲವನ್ನೂ ಗಮನಿಸಿದ್ದ ಬಿಗ್‌ಬಾಸ್ ಕಿಚ್ಚ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಶೋನಲ್ಲಿ ಮನೆ ಮಂದಿಗೆ ನೀತಿ ಪಾಠ ಹೇಳಿಕೊಟ್ಟರು. ಅಲ್ಲದೆ, ಡ್ರೋನ್ ಪ್ರತಾಪ್ ನಗುವಿಗೆ ಕಾರಣರಾದರು. ಪ್ರತಾಪ್ ಸ್ಟೈಲ್ ಸಹ ಬದಲಾಯಿಸಿದರು. ಇದನ್ನ ಗಮನಿಸಿದ ಪ್ರೇಕ್ಷಕರು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಜೈ ಪ್ರತಾಪ್ ಅಂತ ಕಾಮೆಂಟ್ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ.ಇನ್ನು ಕೆಲ ನೆಟ್ಟಿಗರು ತಪ್ಪು ಮಾಡೋದು ಸಹ ಆದ್ರೆ ಅವರು ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಬಂದಿದ್ದು, ಅವರ ವ್ಯಯಕ್ತಿಕ ವಿಚಾರ ನಿಂದನೆ ಸರಿಯಲ್ಲ ಅಂತ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೆಲವರು ಪ್ರತಾಪ್ ನಾವಿದ್ದಿವಿ ನೀವು ಧೈರ್ಯದಿಂದ ಆಟವಾಡಿ ಅಂತ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಮುಂದಿನ ಸಲ ಪ್ರತಾಪ್ ಓಟಿಂಗ್ ವಿಚಾರ ಬಂದಾಗ ಗೆಲ್ಲೋದು ಪಕ್ಕಾ ಅನಿಸುತ್ತಿದೆ.
