
ಉದಯವಾಹಿನಿ ಶಿಡ್ಲಘಟ್ಟ: ಗ್ರಾಮಕ್ಕೆ ನೀರು ಹಾಯಿಸುವ ಜಲಗಾರ ಇಲ್ಲದೆ ಸಮಯಕ್ಕೆ ನೀರು ಬಿಡುವವರಿಲ್ಲದೆ ಬೇರೆ ಗ್ರಾಮದ ಜಲಗಾರ ಇಷ್ಟ ಬಂದಾಗ ಬಿಡುವುದು ಜ್ಞಾಪಕ ಬಂದಾಗ ಆಪ್ ಮಾಡುವುದು ಅಲ್ಲಿಯವರಿಗೂ ವೇಸ್ಟಾಗಿ ನೀರು ಹಳ್ಳ ಸೇರುತ್ತದೆ. ಮಲ್ಲಹಳ್ಳಿ ಗ್ರಾಮದಲ್ಲಿ ಮಾತ್ರ ಜಲಗಾರ ನಿವೃತ್ತಿಯಾಗಿ ಎರಡು-ಮೂರು ವರ್ಷವಾದರೂ ಇದುವರೆಗೂ ಬೇರೆ ಜಲಗಾರನನ್ನು ಆಯ್ಕೆ ಮಾಡದೆ ಅಧಿಕಾರಿಗಳು ಕಾಲಕಳೆಯುತ್ತಿದ್ದಾರೆ ಎಂದು ಗ್ರಾಮಸ್ಥ ನಾಗೇಶ್ ಆಗ್ರಹಿಸಿದರು.ಶಿಡ್ಲಘಟ್ಟ ತಾಲೂಕಿನ ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲಹಳ್ಳಿ ಗ್ರಾಮದ ಕಂಡು ಬಂದ ಸಮಸ್ಯೆ. ಇನ್ನು ಗ್ರಾಮಕ್ಕೆ ಬೇಟಿ ಕೊಟ್ಟರೆ ಮೊದಲು ಸ್ವಾಗತ ನೀಡುವ ಪಾಚಿ ಕುಂಟೆ ರಸ್ತೆ ಕಾಣದಂತೆ ಗಿಡ ಗಂಟೆಗಳಿಂದ ಸ್ವಾಗತಿಸುತ್ತವೆ.ಸ್ಚಚ್ಚತೆ ಕಾಣದೆ ಚರಂಡಿಗಳಲ್ಲಿ ತುಂಬಿ ತುಳುಕುತ್ತಿರುವ ಗಲೀಜು ನೀರು ಅದೆಷ್ಟು ವರ್ಷಗಳಾಯಿತೊ ಗೊತ್ತಿಲ್ಲ. ಇನ್ನು ಗ್ರಾಮದ ಚರಂಡಿಗಳಂತು ಬ್ಲೀಚಿಂಗ್ ಮುಖ ನೋಡಿ ಸುಮಾರು ವರ್ಷಗಳೇ ಕಳೆದಿವೆ ಎಂದಂತಿದೆ. ಮಳೆ ಹಿನ್ನಡೆಯಿಂದ ಚರಂಡಿಗಳಲ್ಲಿ ನಿಂತ ನೀರಿನಿಂದ ರೋಗ ರುಜಿನುಗಳ ಭಯದಲ್ಲಿ ಗ್ರಾಮಸ್ಥರು ಬದುಕುವಾಂತಾಗಿದೆ ಎಂದರು. ಮಲ್ಲಹಳ್ಳಿ ಗ್ರಾಮದ ಮನೆಗಳ ಪಕ್ಕದಲ್ಲಿ ಕಸದ ರಾಶಿ ರಾಶಿ ಇದ್ದರೂ ಹೇಳುವವರೂ ಇಲ್ಲ ಕೇಳುವವರು ಇಲ್ಲ. ಗ್ರಾಮಕ್ಕೆ ನೀರು ಹಾಯಿಸುವ ಸಿಸ್ಟನ್ ಸುತ್ತ ಮುತ್ತ ಅಂತೂ ಸ್ವಚ್ಚತೆ ಇಲ್ಲದೆ ತಿಪ್ಪೆ ಗುಂಡಿಯಾಗಿದೆ. ಗ್ರಾಮದಲ್ಲಿ ವ್ಯವಸ್ಥಿತ ರಸ್ತೆ ಇಲ್ಲದೆ ಗ್ರಾಮದ ಮದ್ಯೆ ಕಾಲು ದಾರಿಗಳು ಎದ್ದು ಕಾಣುತ್ತಿವೆ.
ಗ್ರಾಮಪಂಚಾಯತಿ ಇದ್ದರೂ ಇಲ್ಲದಂತಾಗಿದೆ. ನೂತನ ಅಧ್ಯಕ್ಷರನ್ನು ಕಛೇರಿಯಲ್ಲಿ ನೋಡೆ ಇಲ್ಲ, ಗ್ರಾಮಕ್ಕೆ ಸಂಭಂದಿಸಿದ ಪಂಚಾಯತಿ ಸದಸ್ಯ ಅಂತೂ ಎರಡು ವರ್ಷದಿಂದ ಕಾಣಿಯಾಗಿದ್ದಾನೆ ಎಂದು ಗ್ರಾಮಸ್ಥ ದೇವರಾಜ್ ಆರೋಪಿಸಿದರು. ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯತ್ ರಾಜ್ ಇಲಾಖೆ ನೇತೃತ್ವ ವಹಿಸಿರುವ ಗ್ರಾಮ ಪಂಚಾಯತಿ ಕಛೇರಿ ಇದ್ದರೂ ಇಲ್ಲದಂತಾಗಿದೆ, ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಸಮಸ್ಯೆ ಒಮ್ಮೆ ನೋಡಲು ಬಂದಿಲ್ಲ, ಗ್ರಾಮಸ್ಥರಿಗೆ ಬೇಕಿರುವುದು ಸ್ವಚ್ಚತೆ, ಸಮಯಕ್ಕೆ ನೀರು, ರಾತ್ರಿ ಹೊತ್ತು ಬೀದಿ ದೀಪ ಅಲ್ಲವೆ ಅಷ್ಟಿದ್ದರೆ ಮತ್ತೇನು ಕೇಳುತ್ತಾರೆ ಹಳ್ಳಿಯ ಜನ ಎಂಬುದು ಎಲ್ಲರಿಗೂ ತಿಳಿದಿದೆ.
