ಉದಯವಾಹಿನಿ, ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಮತ್ತು ಪಶ್ಚಿಮ ಬಂಗಾಳದ ಕೃಷ್ಣಾನಗರದ ಲೋಕಸಭಾ ಸಂಸದ ಮಹುವಾ ಮೊಯಿತ್ರಾ ಅವರ ಹಲವಾರು ವೈಯಕ್ತಿಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಫೋಟೋವೊಂದರಲ್ಲಿ ಮಹುವಾ ಮೊಯಿತ್ರಾ ಅವರು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ವೈರಲ್ ಚಿತ್ರಗಳ ಬಗ್ಗೆ ಸಂಸದ ಮಹುವಾ ಯಾವುದೇ ವಿಶೇಷ ಆಶ್ಚರ್ಯವನ್ನು ವ್ಯಕ್ತಪಡಿಸಿಲ್ಲ,ಆ ವೈರಲ್ ಚಿತ್ರಗಳಿಗೆ ಬಿಜೆಪಿಯ ಟ್ರೋಲ್ ಆರ್ಮಿಯೇ ಹೊಣೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಆರೋಪಿಸಿದ್ದಾರೆ.
ಬಂಗಾಳದ ಮಹಿಳೆಯರು ಜೀವನ ನಡೆಸುತ್ತಾರೆ, ನಟಿಸುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಮಹುವಾ ಮೊಯಿತ್ರಾ ಅವರು ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತಿತರರು ರೆಸ್ಟೋರೆಂಟ್‌ವೊಂದರಲ್ಲಿ ಊಟ ಮಾಡುತ್ತಿರುವುದನ್ನು ಚಿತ್ರಗಳು ಸಾಮಾಜಿಕ
ಮಾಧ್ಯಮದಲ್ಲಿ ವೈರಲ್ ಆಗಿವೆ. ತರೂರ್ ಅವರ ಜೊತೆಆತ್ಮೀಯವಾಗಿರುವ ಚಿತ್ರವೂ ಇದರಲ್ಲಿದ್ದು, ನೆಟ್ಟಿಗರ
ಕಾಮೆಂಟ್‌ಗೆ ಆಹಾರವಾಗಿದೆ.ಈ ಫೋಟೋಗಳು ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ, ಮಹುವಾ ಅವರನ್ನು ಗೇಲಿ ಮಾಡಿರುವ ನೆಟಿಜನ್‌ಗಳು ಶಶಿ ತರೂರ್ ಮತ್ತು ಮಹುವಾ ಮೊಯಿತ್ರಾ ನಡುವೆ ಏನೋ ಆಹಾರ ತಯಾರಾಗುತ್ತದೆ ಎಂದು ತಮಾಷೆ ಮಾಡಿದ್ದಾರೆ.
