
ಉದಯವಾಹಿನಿ,ಚಿಂಚೋಳಿ: ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವಾಲ್ಮೀಕಿ ಜಯಂತಿಗಳನ್ನು ಸರ್ಕಾರದ ಅಧೀನದಲ್ಲಿ ಬರುವ ಎಲ್ಲಾ ಕಛೇರಿಗಳು,ವಸತಿ ನಿಲಯಗಳಲ್ಲಿ,ಅಂಗನವಾಡಿ ಕೇಂದ್ರಗಳಲ್ಲಿ,ಗ್ರಾಮ ಪಂಚಾಯತ್ ಕಟ್ಟಡದಲ್ಲಿ,ಸರ್ಕಾರಿ ಶಾಲಾಕಾಲೇಜುಗಳಲ್ಲಿ ತಪ್ಪದೆ ಕಡ್ಡಾಯವಾಗಿ ಆಚರಣೆ ಮಾಡಬೇಕು ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಖಡಕ್ ಕ್ಕಾಗಿ ಎಚ್ಚರಿಕೆ ನೀಡಿದರು.ಪಟ್ಟಣದ ತಹಸೀಲ್ ಸಭಾಂಗಣದಲ್ಲಿ ಅ.23ರಂದು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅ.28ರಂದು ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವಾಲ್ಮೀಕಿ ಜಯಂತಿಗಳು ಸರಳವಾಗಿ ಆಚರಣೆ ಮಾಡಲಾಗುವುದು.ಜಯಂತಿ ಆಚರಣೆ ಮಾಡುವುದು ಸರ್ಕಾರದ ಆದೇಶವಿದೆ ತಹಸೀಲ್ದಾರ್ ಆದೇಶ ಮಾಡುವುದು ಅವಶ್ಯಕತೆ ಇರುವುದಿಲ್ಲ,ತಾಲ್ಲೂಕಾ ಮಟ್ಟದ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಜಯಂತಿ ಆಚರಣೆ ಮಾಡಬೇಕು ಯಾವುದೇ ದೂರುಗಳು ಬಂದಿದರೆ ಅಮಾನತು ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಕಡ್ಡಿ ಮುರಿದಂತೆ ಹೇಳಿದರು.ಪೂರ್ವಭಾವಿ ಸಭೆಯಲ್ಲಿ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಟಿಹೆಚ್ಓ ಡಾ.ಮಹ್ಮುದ್ ಗಫಾರ್,ಸಮಾಜ ಕಲ್ಯಾಣ ಅಧಿಕಾರಿ ಪ್ರಭುಲಿಂಗ ಬುಳ್ಳಾ,ಗಿರಿರಾಜ ಸಜ್ಜನ,ಜೆಸ್ಕಾಂ ಲಾವಣ್ಯ,ಶಿಕ್ಷಣ ಇಲಾಖೆ ನಾಗೇಂದ್ರಪ್ಪ,ಸುಭಾಷ್ ನಿಡಗುಂದಾ,ಬಿಸಿಎಂ ಉಮೇಶ,ಸಂಜೀವಕುಮಾರ ಪಾಟೀಲ,ನೀಲಕಂಠ ಸೀಳಿನ,ಸುರೇಶ ದೇಶಪಾಂಡೆ,ವಾಲ್ಮೀಕಿ ಸಮಾಜ ಅಧ್ಯಕ್ಷ ಜನಾರ್ಧನ ಎಂಪಳ್ಳಿ,ಮಹೇಶ ನಾಯಕ,ಮಾರುತಿ ಎಂಪಳ್ಳಿ,ಮಧುಕರ,ಸಾಯಿ,ಸಂಜುಕುಮಾರ, ಮೋಹನ,ರಾಜು,ಮಲ್ಲಿಕಾರ್ಜುನ,ನರಸಪ್ಪ, ರಮೇಶ,ಅನೇಕರಿದ್ದರು.
ಪಟ್ಟಣದಲ್ಲಿ ವಿವಿಧ ಸಮುದಾಯದ ಭವನ ಹಾಗೂ ವೃತ್ತವಿರುತ್ತವೆ ಆದರೆ ವಾಲ್ಮೀಕಿ ಭವನ ಹಾಗೂ ವೃತ್ತ ಇರುವುದಿಲ್ಲ ಕಾರಣ ಚಿಂಚೋಳಿ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ಮತ್ತು ವೃತ್ತ ನಿರ್ಮಿಸಲು ಸ್ಥಳವಕಾಶ ಮಂಜೂರು ಮಾಡುವಂತೆ ತಹಸೀಲ್ದಾರ್ ಸುಬ್ಬಣ ಜಮಖಂಡಿಯವರಿಗೆ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜನಾರ್ಧನ ಮೇಲ್ಗೀರಿ ನೇತೃತ್ವದಲ್ಲಿ ಮನವಿಪತ್ರ ಸಲ್ಲಿಸಿದರು.
