ಉದಯವಾಹಿನಿ ದೇವದುರ್ಗ: ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕಟ್ಟಿ ಗ್ರಾಮದಲ್ಲಿ ಕೆಲ ಕಿಡಿಗೇಡಿಗಳು ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಮಸಿ ಬಡಿದು ಅವಮಾನ ಮಾಡಿದ್ದಂತ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ತಾಲೂಕ ವೀರಶೈವ ಸೇರಿ ವಿವಿಧ ಸಮಾಜದ ಮುಖಂಡರು ಗುರುವಾರ ಬಸವೇಶ್ವರ ವೃತ್ತದಿಂದ ಮಿನಿವಿಧಾನಸೌಧವರೆಗೆ ಪ್ರತಿಭಟಿಸಿ ರಾಜ್ಯ ಪಾಲರಿಗೆ ಬರೆದ ಮನವಿ ಉಪತಹಶೀಲ್ದಾರ ಗೋವಿಂದ ನಾಯಕ ಮುಖಾಂತರ ಸಲ್ಲಿಸಿದರು. ಮುತ್ತಾಗ ಗ್ರಾಮದಲ್ಲಿ ನಂದಿ ಬಸವೇಶ್ವರ ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತ ಮುನ್ನೆಚ್ಚರಿಕೆ ವಹಿಸಬೇಕು. ಇಂತಹ ವಾತಾವರಣ ನಿರ್ಮಾಣವಾದ್ದರಿಂದ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗುತ್ತ ಎಂದು ದೂರಿದರು. ಮಹನೀಯರಿಗೆ ಆಗಾಗ ಅವಮಾನ ಘಟನೆಗಳು ನಡೆಯುತ್ತಿವೆ. ವಿನಾಕಾರಣ ಗೊಂದಲಗಳು ಸೃಷ್ಠಿ ಮಾಡುವಂತ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರ ಮಾಡಬೇಕು. ಮಹನೀಯರ ವೃತ್ತದಲ್ಲಿ ಸಿಸಿಕ್ಯಾಮಾರ ಅಳವಡಿಸಬೇಕು. ಹಲಕಟ್ಟಿ ಗ್ರಾಮದಲ್ಲಿ ನಡೆದಿರುವ ಘಟನೆ ಕುರಿತು ತಕ್ಷಣವೇ ಆರೋಪಿಗಳು ಬಂಧಿಸಬೇಕು. ಅವರಿಗೆ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಡಾ.ಕಿರಣ್ ಖೇಣೇದ್, ಮಲ್ಲಣ್ಣಗೌಡ ಗೆಜ್ಜೆಭಾವಿ, ಬಸವರಾಜಪ್ಪ ವಾರದ, ಚಂದ್ರಶೇಖರ ಪಾಟೀಲ್ ಮಿಯ್ಯಪೂರು, ಟಿಎಪಿಎಂಸಿ ಅಧ್ಯಕ್ಷ ಶರಣಗೌಡ ಕಮತಗಿ, ಸತೀಶ್ ಬಳೆ, ಮಹಾದೇವ ಪಾಟೀಲ್, ಬಸವರಾಜ ನಾಯಕ ಮಸ್ಕಿ, ಪ್ರಕಾಶ ವಕೀಲ ಅಮರಾಪುರು, ದೊಡ್ಡ ರಂಗಣ್ಣ ಪಾಟೀಲ್, ವಿನೋದ ಕುಮಾರ, ಮರಿಲಿಂಗಪ್ಪ ವಕೀಲ, ಸಂಗಮೇಶ ಹರವಿ, ಬಲಭೀಮ ಹೂಗಾರ, ಬಸವರಾಜ ಮಡಿವಾಳ, ದೇಸಾಯಿ, ವಿನೋದ ಪಾಟೀಲ್, ಶಿವನಗೌಡ ಕುಪ್ಪಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!