ಜೇವರ್ಗಿ: ತಾಲೂಕಿನ ಗಣಪತಿ ವಿಸರ್ಜನೆ ನಿಮಿತ್ಯವಾಗಿ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಶ್ರೀಮತಿ ಈಶಾ ಪಂತ್ ಅವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ನಗರಗಳಲ್ಲಿ ಪೊಲೀಸ್ ಪೆರೇಡ್ ಜರುಗಿತು. 

ಎಸ್ ಪಿ ಈಶಾ ಪಂತ್ ಮಾತನಾಡಿ ಶಾಂತಿಯುತವಾಗಿ ಗಣಪತಿ ವಿಸರ್ಜನೆ ಮಾಡಲು ಗಣಪತಿ ಮಂಡಳಿಗೆ ಸೂಚನೆ ನೀಡಿದರು. ಅಶಾಂತಿ ಉಂಟುಮಾಡಿದ್ದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶಿವಪ್ರಸಾದ್ ಹಿರೇಮಠ್, ಪಿಎಸ್ಐ ಸಂಗಮೇಶ ಅಂಗಡಿ, ಕ್ರೈಂ ಪಿಎಸ್ಐ ಸಿದ್ದರಾಮಪ್ಪ, ಉಪಸ್ಥಿತರಿದ್ದರು.

error: Content is protected !!