ಚಿತ್ರದುರ್ಗ, (ಸೆಪ್ಟೆಂಬರ್.19): ಪೋಕ್ಸ್ ಕಾಯ್ದೆಯಡಿ ಬಂಧಿತರಾಗಿರುವ ಆರೋಪಿ ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮೀಜಿ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮತ್ತೆ ಮುಂದೂಡಿದೆ.

ಸೆಪ್ಟೆಂಬರ್ 19ಕ್ಕೆ ವಿಚಾರಣೆ ಮುಂದೂಡಿ ಚಿತ್ರದುರ್ಗ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ವಾರಗಳಿಂದಲೂ ಮುರುಘಾ ಶ್ರೀಗಳ ಜಾಮೀಜು ಅರ್ಜಿ ವಿಚಾರಣೆ ಕೋರ್ಟ್‌ ಮುಂದೂಡುತ್ತಲೇ ಬಂದಿತ್ತು ಆದ್ರೆ,ಸೋಮವಾರ ಜಾಮೀನು ಅರ್ಜಿ ಬಗ್ಗೆ ಅಂತಿಮ ಆದೇಶ ನೀಡುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿಹಾಕಿ ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 23ಕ್ಕೆ ಮುಂದೂಡಿ ಆದೇಶಿಸಿದೆ ಈ ಹಿನ್ನೆಯಲ್ಲಿ ಮುರುಘಾಶ್ರೀಗೆ ಸೆರೆವಾಸವೇ ಗತಿಯಾಗಿದೆ. 

error: Content is protected !!