ಉದಯವಾಹಿನಿ, ನವದೆಹಲಿ : ಇಂಡಿಯಾ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡುವ ಪ್ರಕ್ರಿಯೆಗೆ ಮತ್ತಷ್ಟು ಚಾಲನೆ ಸಿಕ್ಕಿದ್ದು, ಇದೀಗ ರೈಲ್ವೆ ಸಚಿವಾಲಯ ಇಂಡಿಯಾ ಕೈ ಬಿಟ್ಟು ಭಾರತ್ ಎಂದು ಬದಲಾಯಿಸುವಂತೆ ಕೆಂದ್ರ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಲಾಜಿಸ್ಟಿಕ್ಸ್ ವೆಚ್ಚ, ಸರಕು ಮತ್ತು ದೇಶದ ಆರ್ಥಿಕತೆಯ ಮಾದರಿ ಪಾಲು ಎಲ್ಲದರಲ್ಲೂ ಇಂಡಿಯಾ ಬದಲಿಗೆ ‘ಭಾರತ್ ಅನ್ನು ಬಳಳಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದೆ.ಮುಂದಿನ ದಿನಗಳಲ್ಲಿ ಸರ್ಕಾರಿ ದಾಖಲೆಗಳಲ್ಲಿ ’ಭಾರತ್ ಬಳಕೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ. ಸಂವಿಧಾನದಲ್ಲಿ ಇಂಡಿಯಾ ಮತ್ತು ’ಭಾರತ್ ಅನ್ನು ಪರಸ್ಪರ ಬದಲಿಯಾಗಿ ಬಳಸಲಾಗಿದೆ ಮತ್ತು ಸಚಿವ ಸಂಪುಟದಲ್ಲಿ ಈ ಬಗ್ಗೆ ಒಮ್ಮೆ ನಿರ್ಧಾರ ಕೈಗೊಂಡ ಬಳಿಕ ಅಧಿಕೃತವಾಗಲಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು “ಇಂಡಿಯಾ ರಾಷ್ಟ್ರಪತಿ” ಬದಲಿಗೆ “ಭಾರತದ ರಾಷ್ಟ್ರಪತಿ” ಎಂದು ಕಳುಹಿಸಿದ ಜಿ-೨೦ ಔತಣಕೂಟಕ್ಕೆ ಆಹ್ವಾನದ ನಂತರ ಇಂಡಿತಾ ಬದಲಿಗೆ “ಭಾರತ್ ಪದ ಬಳಸುವ ವಿಷಯ ಹೆಚ್ಚು ಚಾಲ್ತಿಗೆ ಬಂದಿದೆ. ಜಿ ೨೦ ನಾಯಕರ ಶೃಂಗಸಭೆಯಲ್ಲಿಯೂ ಸಹ, ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಇಂಡಿಯಾ ಹೆಸರು ಬದಲು “ಭಾರತ್ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!