ಉದಯವಾಹಿನಿ ಬಸವನಬಾಗೇವಾಡಿ: 2022-23ನೇ ಸಾಲಿನ ನಬಾರ್ಡ ಲೆಕ್ಕ ಶಿರ್ಷಿಕೆ ಅಡಿಯಲ್ಲಿ ತಾಲೂಕಿನ ಮುತ್ತಗಿ ಗ್ರಾಮದ ಹಳ್ಳಕ್ಕೆ 1೦೦ ಲಕ್ಷ ರೂಗಳ ವೆಚ್ಚದಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಗೆ ಕೈಮಗ್ಗ ಮತ್ತು ಜವಳಿ, ಸಕ್ಕರೆ ಅಭಿವೃದ್ದಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುತ್ತಗಿಯ ವೀರರುದ್ರಮುನಿ ಶಿವಾಚರ‍್ಯ ಸ್ವಾಮೀಜಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಹಾರಿವಾಳ, ಪ್ರೇಮಕುಮಾರ ಮ್ಯಾಗೇರಿ, ಪಿಡಿಓ ಬಿ.ಎಸ್ ಬಡಿಗೇರ, ನೀಲಾ ಪ್ರಭುಗೌಡ ಪಾಟೀಲ, ಕವಿತಾ ಬಡಿಗೇರ, ಸಣ್ಣ ನೀರಾವರಿ ಇಲಾಖೆ ಎಇಇ ವಿ.ಸಿ ವಸ್ತೃದ, ಭೀಮಣ್ಣ ಜಗ್ಗಲ್, ಸಿಬಿ ಅಸ್ಕಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!