
ಉದಯವಾಹಿನಿ ಚಿತ್ರದುರ್ಗ:ದಿನಾಂಕ 29ರ ಭಾನುವಾರ ಚಿತ್ರದುರ್ಗದ ಭಾವಸಾರ ಕ್ಷತಿಯ ದೈವ ಮಂಡಳಿ ಹಾಗೂ ಭಾವಸಾರ ಮಹಿಳಾ ಮಂಡಳಿ ಚಿತ್ರದುರ್ಗ ಇವರು ಸಂಯುಕ್ತವಾಗಿ ಭಾವಸಾರ ಕ್ಷತ್ರಿಯ ಸಮಾಜದ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಏಳಿಗೆಗಾಗಿ ಸೇವೆ ಸಲ್ಲಿಸಿದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು.ನಗರದ ಅಯ್ಯಣ್ಣನ ಪೇಟೆಯ ಭಾವಸಾರ ಕಲ್ಯಾಣ ಮಂಟಪದಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯಾಧ್ಯಕ್ಷ ಶ್ರೀ ಎನ್ ವಿ ಶ್ರೀನಿವಾಸ್ ರಾವ್ ಪಿಸ್ಸೆ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿ ಕ್ಷತ್ರಿಯ ಸಮಾಜದ ಏಳಿಗೆಗಾಗಿ ಸಮಾಜದ ಎಲ್ಲಾ ಬಂಧು ಭಗಿನಿಯರು ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದರು . ಎಸ್ ಎಸ್ ಎಲ್ ಸಿ., ಪಿಯೂಸಿ ಹಾಗೂ ಪದವಿ ತರಗತಿಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ 21 ಮಕ್ಕಳಿಗೆ ನಗದು ಪುರಸ್ಕಾರ ಹಾಗೂ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮತ್ತು ಆರ್ ಟಿ ಇ ಆಧಾರದ ಮೇಲೆ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಭಾವಸಾರ ಕ್ಷತ್ರಿಯ ಸಮಾಜದ 21 ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಇದೇ ಸಂಧರ್ಭದಲ್ಲಿ ಸಮಾಜದಲ್ಲಿ ಮೃತರಾದವರಿಗೆ ಶವ ಸಂಸ್ಕಾರ ಸೇವೆ ಸಲ್ಲಿಸುತ್ತಿರುವ ಪರಮೇಶ್ವರ ರಾವ್ ನಾಜ್ರೆ ಸೇರಿದಂತೆ ಹಿರಿಯರಾದ ಸಿ.ಟಿ. ವಾಸುದೇವ ರಾವ್ ಮುಸಳೆ, ಗಣೇಶ್ ಮೂರ್ತಿ ಅಂಬೇಕರ್, ಬಿ.ವಿ. ತುಕಾರಾಂ ಮಹಳತ್ಕರ್, ಹಾಗೂ ಎಂ.ವಿ. ವಿನಾಯಕ ಮುಸಳೆ ಇವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಚಿತ್ರದುರ್ಗ ಭಾವಸಾರ ದೈವ ಮಂಡಳಿ ಅಧ್ಯಕ್ಷರಾದ ಆರ್.ಎಂ.ಶ್ಯಾಮ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಮತ ಬೇದ್ರೆ, ನಾಗಲಕ್ಷ್ಮಿ ಗುಜ್ಜರ್, ಮಂಜುಳ ಮಂಜುನಾಥ ಗುಜ್ಜರ್, ಶೋಭ ದಯಾನಂದ, ಶಾರದ ಸತೀಶ್ ಗುಜ್ಜರ್, ಸೋನಿ ಭೀಮರಾವ್ ಅಂಬೇಕರ, ಮಹಾಲಕ್ಷ್ಮಿ ಗುಜ್ಜರ್ ಗೀತಾ ಕೃಷ್ಣ ಮುಸಳೆ,ದೈವ ಮಂಡಳಿಯ ವತಿಯಿಂದ ಬಿ ಎಸ್ ನಾಗರಾಜ್ ಬೇದ್ರೆ, ಶ್ರೀನಾಥ್ ಬೇದ್ರೆ, ರಾಜೇಶ್ ಬೇದ್ರೆ, ಶ್ರೀಧರ್ ಗುಜ್ಜರ್, ಸಂತೋಷ್ ಬಾಬು ಜಿ ಪಿ ನಾಗರಾಜ್ ಗುಜ್ಜರ್, ಮಹತ್ಕರ್, ಪರಶುರಾಮ್ ಕಾಂಗೋಕರ್ ಭಾಗವಹಿಸಿದ್ದರು.
