
ಉದಯವಾಹಿನಿ ಅಫಜಲಪುರ: ಕಲಬುರಗಿ ಜಿಲ್ಲೆಯ ಚಿತಾಪೂರ ತಾಲೂಕಿನ ಕಲಗುರ್ತಿ ಗ್ರಾಮದ ಯುವಕ ದಯಾನಂದ ಕೊರಬಾ ಆತ್ಮಹತ್ಯೆ ಪ್ರಕರಣ ಖಂಡಿಸಿ ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೋಲಿ ಕಬ್ಬಲಿಗ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು. ಸತತ 35 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಇಂದು ಕೊಲಿ ಸಮಾಜದ ಮಠಾಧಿಶರು ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದರು. ನಮ್ಮ ಸಮಾಜದ ಯುವಕ ದಯಾನಂದ ಕೊಲೆಯಾಗಿ ನೂರು ದಿನಗಳೇ ಕಳೆದರೂ ಇಲ್ಲಿಯವರೆಗೆ ಆರೋಪಿಗಳಿಗೆ ಬಂದಿಸಿಲ್ಲ.ಮೃತ ಯುವಕನ ಕುಟುಂಬಕ್ಕೆ ಪರಿಹಾರವು ನೀಡಿಲ್ಲ. ಸರಕಾರ ಮತ್ತು ಅಧಿಕಾರಿಗಳ ಈ ಧೋರಣೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆ ಬಂದ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ನಂತರ.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕೊಲಿ ಸಮಾಜದ ಮುಖಂಡ ಅವ್ವಣ್ಣ ಮ್ಯಾಕೇರಿ ದೇವಾನಂದ ಆತ್ಮಹತ್ಯೆ ನಡೆದು ಸುಮಾರು 100 ದಿನಗಳು ಕಳೆದು ಹೋದರೂ ಇನ್ನೂ ನ್ಯಾಯ ಸಿಗುತ್ತಿಲ್ಲ.ಈ ರೀತಿಯ ಧೋರಣೆ ನಮ್ಮ ಸಮಾಜದ ಮೇಲೆ ತೊರುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ.ಈ ಹಿಂದೆ ನಾವು ರಾಜ್ಯ ಹೆದ್ದಾರಿ ತಡೆದು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದೆವೆ. ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡುಲು ಬಂದ ನಮಗೆ ಬಂದಿಸುತ್ತಾರೆ.ಕೇಸ್ ಹಾಕುತ್ತಾರೆ. ಆದರೆ ಕೊಲಿ ಸಮಾಜದ ಯುವಕನ ಆತ್ಮಹತ್ಯೆಗೆ ಕಾರಣರಾದ ಆರೋಪಿಗಳನ್ನು ಬಂದಿಸದೇ ರಾಜಾರೋಷವಾಗಿ ಓಡಾಡಲು ಬಿಟ್ಟಿದ್ದಾರೆ. ಇದಕ್ಕೆ ನೇರ ಕಾರಣ ಸರಕಾರ ಮತ್ತು ಜನಪ್ರತಿನಿಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣ ಮುಚ್ಚಿ ಹಾಕಲು ಪೊಲೀಸರೇ 3 ಲಕ್ಷ ರೂಪಾಯಿ ಕೊಡುತ್ತಾರೆ ಎಂದರೆ ಪ್ರಜಾಪ್ರಭುತ್ವ ದಲ್ಲಿ ಪ್ರಜೆಗಳಿಗೆ ಯಾವ ಸ್ಥಾನ ಸಿಗುತ್ತಿದೆ ಎಂದು ಗೊತ್ತಾಗುತ್ತದೆ.ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.ಆರೋಪಿಗಳನ್ನು ರಕ್ಷಿಸುವ ದೃಷ್ಟಿಯಿಂದ ದೇವಾನಂದ ಪ್ರಕರಣವನ್ನು ಸಿ.ಐ.ಡಿ ಗೆ ವಹಿಸಿದ್ದಾರೆ. ಕುಟುಂಬದ ಮತ್ತು ಯಾರ ಒತ್ತಾಯವಿಲ್ಲದೇ ಸಿ.ಐ.ಡಿ ಗೆ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕೂಡಲೇ ಸರಕಾರ ಎಚ್ಚೆತ್ತಕೊಂಡು ಆರೋಪಿಗಳನ್ನು ಬಂಧಿಸಿ ಸೂಕ್ತ ತನಿಖೆ ಮಾಡಿ,ಸಿ.ಬಿ.ಐ ಗೆ ಒಪ್ಪಿಸಬೇಕು.ದೇವಾನಂದ ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ನೌಕರಿ ಕೊಡಿಸಬೇಕು.ಮತ್ತು ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಇಲ್ಲವಾದರೆ,ಕಲಬುರಗಿ ಜಿಲ್ಲೆಯನ್ನು ಸಂಪೂರ್ಣವಾಗಿ ಬಂದ್ ಮಾಡುತ್ತೆವೆ ಇದಕ್ಕೆ ನೇರ ಹೊಣೆ ಸರಕಾರ ಮತ್ತು ಅಧಿಕಾರಿಗಳು ಆಗಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕೋಲಿ ಸಮಾಜದ ಮಠಾಧೀಶರಾದ ರಾಜು ಗುರು ಸ್ವಾಮಿಜಿ,ಶರಣಕೊತ್ಲಪ್ಪ ಮುತ್ಯಾ,ಚಿದಾನಂದ ಸ್ವಾಮಿಜಿ,ಸಿದ್ದಿಶಿವಯೋಗೇಶ್ವರ ಸ್ವಾಮಿಜಿ ಸೇರಿದಂತೆ ಮುಖಂಡರಾದ, ರವಿ ಡೊಂಗರಗಾಂವ್, ರಮೇಶ ಪ್ರೇಮ ಕೋಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
