
ಉದಯವಾಹಿನಿ ಮುದಗಲ್ಲ : ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲ ಕ್ಕಾಗಿ ಇರುವ ಶೌಚಾಲಯ ವಸೂಲಿ ತಾಣಗಳಾಗಿ ಮಾರ್ಪಟ್ಟಿದ್ದು, ಟೆಂಡರ್ ಷರತ್ತಗಳನ್ನು ಉಲ್ಲಂಘಿಘಿಸಿ ಮನಸ್ಸಿಗೆ ಬಂದಂತೆ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.ಬಹಿರ್ದೆಸೆಗೆ ಹೋಗುವ ಪ್ರಯಾಣಿಕರಿಂದ ತಲಾ ರೂ.3 ಶುಲ್ಕವಾಗಿ ಪಡೆದುಕೊಳ್ಳಬೇಕು. ಆದರೆ, ಟೆಂಡೆರದವರು ಪ್ರತಿ ಯೊಬ್ಬರಿಂದ ರೂ.10 ಶುಲ್ಕ ವಸೂಲಿ ಮಾಡುತ್ತಿದ್ದಾರೆ. ನಿಗದಿಗಿಂತ ಹೆಚ್ಚು ಮೊತ್ತ ಸೇರಿದಂತೆ ಉಚಿತ ಸೇವೆ ಕಲ್ಪಿಸಬೇಕಿದ್ದರೂ ಶುಲ್ಕ ನಿಗದಿಪಡಿಸುತ್ತಿರುವುದರಿಂದ ಪ್ರಯಾಣಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಬಸವರಾಜ ಶಿಕಾರಿಪುರ ಅವರು ಹೇಳುತ್ತಾರೆ.
ಸೂಚನೆ ಕಾಣಲ್ಲ: ಶೌಚಾಲಯ ಪ್ರವೇಶ ದ್ವಾರದಲ್ಲಿ ಶೌಚಾಲಯ ಉಪಯೋಗಿಸಲು ಇರುವ ಶುಲ್ಕದ ವಿವರ ಹಾಕಬೇಕು. ಆದರೆ ಇದುವರೆಗೆ ಸೂಚನಾ ಫಲಕ ಹಾಕಿಲ್ಲ. ನಿಗದಿತ ಶುಲ್ಕ ಗೊತ್ತಾದರೆ, ಪ್ರಯಾಣಿಕರು ಜಗಳ ಮಾಡುತ್ತಾರೆ ಎನ್ನುವ ಕಾರಣಕ್ಕೆ ಬರಹವೇ ಇಲ್ಲ . ಬಸ್ ನಿಲ್ದಾಣದ ಶೌಚಾಲಯದಲ್ಲಿಎಲ್ಲಿಯೂ ಇಲ್ಲದ ಗರಿಷ್ಠ ದರ ರೂ.10 ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ವಿಚಾರಿಸಿದರೆ, ಹಣ ಕೊಡಲಾಗದಿದ್ದರೆ, ಹೊರಗೆ ಹೋಗುವಂತೆ ದಬಾಯಿ ಸಲಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಬಸವರಾಜ ಶಿಕಾರಿಪುರ ಅವರು ಪತ್ರಿಕೆ ಮಾಹಿತಿ ನೀಡಿ ಹಾಗೂ ಈ ಕುರಿತು ಮೇಲಧಿಕಾರಿಗಳು ಗಮನ ಹರಿಸಬೇಕು ಹೇಳಿದರು..
