ಉದಯವಾಹಿನಿ ದೇವದುರ್ಗ: ತಾಲೂಕಿನ ಹಲವು ಶಿಶು ಪಾಲನಾ ಕೇಂದ್ರಗಳಿಗೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕೂಲಿ ಕಾರರ ಮಕ್ಕಳ ಲಾಲನೆ ಪಾಲನೆ ಶಿಕ್ಷಕರ ಮೇಲೆ ಹೆಚ್ಚಿನ ಜವಬ್ದಾರಿ ಇದೆ ಎಂದು ಹೇಳಿದರು. ಹೇಮನಾಳ, ಖಾನಾಪೂರು, ಶಾವಂತಗೇರಾ, ಮಾತ್ಪಳ್ಳಿ, ರಾಮನಾಳ, ಮಲ್ಲೇದೇವರಗುಡ್ಡ, ಕೊತ್ತದೊಡ್ಡಿ, ಅರಕೇರಾ, ಅಮರಾಪೂರು ಸೇರಿದಂತೆ ಇತರೆ ಗ್ರಾಮದ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಉದ್ಯೋಗ ಖಾತ್ರಿ ಕೆಲಸಕ್ಕೆ ಹೋದಂತ ಕೂಲಿ ಕಾರರ ಮಕ್ಕಳನ್ನ ಲಾಲನೆ-ಪಾಲನೆ ಮಾಡಲು ಶಿಕ್ಷಕರು ಮನೆ ಮನೆಗೆ ಹೋಗಿ ಮಕ್ಕಳ ಆರೈಕೆ ಮಾಡಬೇಕು. ಕೂಲಿ ಕಾರರಿಂದ ಯಾವುದೇ ದೂರುಗಳು ಬರದಂತೆ ಶಿಕ್ಷಕರು ನಿಗಾವಹಿಸಬೇಕು ಎಂದು ಸೂಚನೆ ನೀಡಿದರು. ಕೂಲಿ ಕಾರರು ಕೆಲಸ ಹೋಗುವ ಮೊದಲು ಮಕ್ಕಳನ್ನು ಶಿಶು ಪಾಲನಾ ಕೇಂದ್ರದಲ್ಲಿ ಬಿಟ್ಟು ಹೋಗಬೇಕು. ಪಾಲನಾ ಕೇಂದ್ರದಲ್ಲಿ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಜತೆ ಆರೈಕೆ ಮಾಡುವ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಅಣ್ಣರಾವ್ ಸೇರಿ ಪಿಡಿಒಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!