ಉದಯವಾಹಿನಿ,ಚಿತ್ರದುರ್ಗ: ದಿನಾಂಕ 30 10.2023 ರಂದು ಬುದ್ಧ ನಗರ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಚಿತ್ರದುರ್ಗ ತಾಲೂಕಿನ ಎಲ್ಲಾ ಆರೋಗ್ಯ ಕ್ಷೇಮ ಉಪ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕುಷ್ಟರೋಗ ಪ್ರಕರಣ ಪತ್ತೆ ಅಭಿಯಾನ 2023 ಮೇಲ್ವಿಚಾರಣ ತರಬೇತಿ ಕಾರ್ಯಗಾರವನ್ನು ಉದ್ದೇಶಿಸಿ ತಾಲೂಕು ಕುಷ್ಟರೋಗ ಮೇಲ್ವಿಚಾರಣಾ ಅಧಿಕಾರಿ ತಿಪ್ಪೇಶ್ವ ವೈ ಮಾತನಾಡಿ ಕುಷ್ಟರೋಗ ಮಾರಣಾಂತಿಕ ರೋಗವಲ್ಲ ಚಿಕಿತ್ಸೆಯಿಂದ ಗುಣಮುಖ ಹೊಂದಬಹುದು ಕುಷ್ಠರೋಗದ ನಿರ್ಮೂಲನೆಯನ್ನು ಸಾಧಿಸಲಾಗಿದೆಯಾದರೂ, ಇನ್ನೂ ಕೆಲವು ವರ್ಷಗಳವರೆಗೆ ಹೊಸ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಸಮಾಜದಲ್ಲಿ ಮತ್ತೆ ರೋಗ ಕಾಣಿಸಿಕೊಳ್ಳದಂತೆ ನಿರಂತರ ನಿಗಾ ವಹಿಸಬೇಕು. ಆರಂಭದಲ್ಲಿ ವಾರ್ಷಿಕ ಹೊಸ ಪ್ರಕರಣ ಪತ್ತೆ ದರ ಗಮನಾರ್ಹ ಕುಸಿತವನ್ನು ತೋರಿಸಿದೆ ಎಂದರು ತಾಲೂಕ್, ಆರೋಗ್ಯ ಶಿಕ್ಷಣಾಧಿಕಾರಿ ಎನ್ಎಸ್ ಮಂಜುನಾಥ್ ಮಾತನಾಡಿ ಹಲವಾರು ಶತಮಾನಗಳಿಂದ, ಕುಷ್ಠರೋಗವು ಒಂದು ಭಯಾನಕ, ಗುಣಪಡಿಸಲಾಗದ ಕಾಯಿಲೆಯಾಗಿ ಉಳಿದಿದೆ. ರೋಗಿಗಳನ್ನು ಅಸಹ್ಯದಿಂದ ನೋಡಲಾಯಿತು, ಬಹಿಷ್ಕರಿಸಲಾಯಿತು ಮತ್ತು ಅಮಾನವೀಯ ಚಿಕಿತ್ಸೆಗೆ ಒಳಪಡಿಸಲಾಯಿತು. ಇಂದು, ಕುಷ್ಠರೋಗದ ವಿರುದ್ಧದ ಕಳಂಕ ಮತ್ತು ಪೂರ್ವಾಗ್ರಹ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ರೋಗದ ವಿನಾಶಗಳು ಸಮುದಾಯದಲ್ಲಿ ವಿರಳವಾಗಿ ಕಂಡುಬರುತ್ತವೆ. ರೋಗವನ್ನು ಗುಣಪಡಿಸಲು ಪರಿಣಾಮಕಾರಿ ಔಷಧಿಗಳ ಲಭ್ಯತೆ, ಆರಂಭಿಕ ರೋಗನಿರ್ಣಯಕ್ಕೆ ತಂತ್ರಜ್ಞಾನದ ಪ್ರವೇಶ, ವಿರೂಪಗಳನ್ನು ತಡೆಗಟ್ಟುವುದು ಮತ್ತು ಸರಿಪಡಿಸುವುದು ಮತ್ತು ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ಹೆಚ್ಚಿದ ಜಾಗೃತಿಯಿಂದಾಗಿ ಇದು ಸಾಧ್ಯವಾಗಿದೆ. ಸಾರ್ವಜನಿಕ ಆರೋಗ್ಯ ಮಟ್ಟದಲ್ಲಿ, ಇದು ಪ್ರಸರಣ ಮತ್ತು ರೋಗದ ಹರಡುವಿಕೆಯ ಪರಿಣಾಮಕಾರಿ ನಿಯಂತ್ರಣಕ್ಕೆ ಕಾರಣವಾಗಿದೆ. ನಾವು ಯಶಸ್ವಿಯಾಗಿ ನಿರ್ಮೂಲನೆಯನ್ನು ಸಾಧಿಸಿದ್ದೇವೆ ಮತ್ತು ಈಗ ಕುಷ್ಠರೋಗದ ನಿರ್ಮೂಲನೆಯತ್ತ ಸಾಗುತ್ತಿದ್ದೇವೆ ಕುಷ್ಟರೋಗ ಪ್ರಕರಣ ಪತ್ತೆ ಅಭಿಯಾನ ರಾಜ್ಯದ್ಯಂತ ದಿನಾಂಕ 15 11 2023 ರಿಂದ ಎರಡು ಹನ್ನೆರಡು 2023 ವರೆಗೂ ನಡೆಯಲಿದ್ದು ಪೂರ್ವಭಾವಿಯಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸೂಕ್ಷ್ಮ ಕ್ರಿಯಾ ಯೋಜನೆಯನ್ನ ತಯಾರಿಸಿ ಸಮೀಕ್ಷೆ ನಡೆಸಲು ಸಂಬಂಧಿಸಿದ ಕ್ಷೇತ್ರ ಸಿಬ್ಬಂದಿಗಳಿಗೆ ತರಬೇತಿಯನ್ನು ಹಮ್ಮಿಕೊಳ್ಳುವಂತೆ ಮತ್ತು ಮೇಲ್ವಿಚಾರಣ ಚೆಕ್ ಲಿಸ್ಟ್ ಅನ್ನ ತಯಾರಿಸಿಕೊಳ್ಳಲು ತಿಳಿಸಿದರು ಬಿ ಮೂಗಪ್ಪ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಮಾತನಾಡಿ ನರಗಳ ತಪಾಸಣೆ ಮಚ್ಚೆಗಳ ತಪಾಸಣೆ ಮಾಹಿತಿ ಶಿಕ್ಷಣ ಸಂವಹನ ಸಮುದಾಯದೊಂದಿಗೆ ನಡೆಸುವ ರೀತಿ ಇತರೆ ಪೂರ್ವಸಿದ್ಧತೆಗಳ ಬಗ್ಗೆ ತಿಳಿಸಿದರು ತರಬೇತಿ ಕಾರ್ಯಗಾರದಲ್ಲಿ ಬುದ್ಧನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಂದ್ರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರೆಡ್ಡಿ ಗುರುಮೂರ್ತಿ ಚಿತ್ರದುರ್ಗ ತಾಲೂಕಿನ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.
