
ಉದಯವಾಹಿನಿ,ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ 40 ನೇ ವಿತರಣಾ ಕಾಲುವೆಗೆ ನೀರು ಪೂರೈಕೆ ಮಾಡಲು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಈ ಪ್ರತಿಭಟನೆ ಕುರಿತು ಮಾತನಾಡಿದ ಕಿಸಾನ್ ಸಭಾದ ಸಂಚಾಲಕ ಡಿ ಎಚ ಕಂಬಳಿ ಅವರು ತುಂಗಭದ್ರಾ ಎಡದಂಡೆ ನಾಲೆಯ 40 ನೇ ವಿತರಣಾ ಕಾಲುವೆ ವ್ಯಾಪ್ತಿಯಲ್ಲಿ ಸಹಸ್ರಾರು ಎಕರೆ ಜಮೀನಿನಲ್ಲಿ ಜೋಳದ ಬೆಳೆ ಬೆಳೆದಿದ್ದು ಬೆಳೆ ಸಂಪೂರ್ಣ ಬಾಡಿ ನಿಂತಿದೆ. ಎಡದಂಡೆ ನಾಲೆಗೆ ಈ ವರ್ಷ ನೀರು ಬಿಟ್ಟಾಗಿನಿಂದಲೂ ಇಲ್ಲಿಯವರೆಗೆ ಕೆಳ ಭಾಗಕ್ಕೆ ಒಂದು ಹನಿ ಸಹ ನೀರು ಪೂರೈಕೆಯಾಗಿರುವುದಿಲ್ಲ. ಎಂದು ಆಗ್ರಹಿಸಿದರು.ಇದರಿಂದ ಮುಂಗಾರು ಹಂಗಾಮಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರುವುದಿಲ್ಲ. ಕಳೆದ ಒಂದು ವರೆ ತಿಂಗಳ ಹಿಂದೆ ಮಳೆ ಬಂದ ಹಿನ್ನೆಲೆಯಲ್ಲಿ ಹೈಬೀಡ್ ಜೋಳವನ್ನು ಬಿತ್ತನೆ ಮಾಡಲಾಗಿದೆ. ಈಗಾದರೂ 40 ನೇ ವಿತರಣಾ ಕಾಲುವೆಗೆ ನೀರು ಹರಿಸಿದರೆ ಜೋಳ ಬೆಳೆಯಲು ಅನುಕೂಲವಾಗುತ್ತದೆ. ಈಗ ನೀರು ಹರಿಸದಿದ್ದರೆ ಸಹಸ್ರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶವಾಗುತ್ತದೆ. ತುರ್ವಿಹಾಳ ಉಪವಿಭಾಗದ ಆಡಳಿತ ವ್ಯಾಪ್ತಿಗೆ ಒಳಪಡುವ ಈ ಕಾಲುವೆಗೆ ನೀರಾವರಿ ಅಧಿಕಾರಿಗಳು ಇಲ್ಲಿಯವರೆಗೆ ನೀರು ಹರಿಸುವ ಕಾರ್ಯದಲ್ಲಿ ನೀರಾವರಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ.ಈಗ ಕಾಲುವೆಗೆ ನೀರು ಹರಿಸಿ ಜೋಳದ ಬೆಳೆಯನ್ನು ಉಳಿಸಲು ತಾವು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಒತ್ತಾಯಿಸಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ತಾಲ್ಲೂಕು ತಹಶಿಲ್ದಾರ್ ಅರುಣ್ ಕುಮಾರ್ ಎಚ್ ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ ಕೆಳಭಾಗದ ರೈತರ ಜಮೀನುಗಳಿಗೆ ನೀರು ಹರಿಸಲು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಚಾಲಕ ವೆಂಕನಗೌಡ ಗದ್ರಟಗಿ.ಬಾಬಾರ ಪಟೇಲ್.ಸಣ್ಣ ಈರಪ್ಪ ಪೂಜಾರಿ.ಹೊಳೆಯಪ್ಪ.ಹೊನ್ನರ ಅಲಿ.ಯಲ್ಲಪ್ಪ ಕಲ್ಲೂರು. ಚಾಂದಸಾಬ ಭಾಷಾ ಸಾಬ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
