ಉದಯವಾಹಿನಿ, ದೇವದುರ್ಗ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ನವೀಕರಣ ಕಾಮಗಾರಿ ಉತ್ತಮ ಕಾಮಗಾರಿ ಮಾಡುವುದರ ಜತೆ ಸುಂದರವಾಗಿ ಕಾಣುವಂತೆ ಕೈಗೊಳ್ಳಬೇಕು ಶಾಸಕಿ ಕರೆಮ್ಮ ಗೋಪಾಲಕೃಷ್ಣ ತಿಳಿಸಿದರು. ರಾಯಚೂರು ಮುಖ್ಯರಸ್ತೆ ಮಾರ್ಗದಲ್ಲಿರುವ ವೃತ್ತದಲ್ಲಿ ೧೨.೨೫ ಲಕ್ಷ ರೂ. ವೆಚ್ಚದ ನವೀಕರಣ ಕಾಮಗಾರಿಗೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಮೂರ್ತಿಗೆ ಪೂಜೆ ಸಲ್ಲಿಸಿ ಸೋಮವಾರ ಚಾಲನೆ ನೀಡಿದರು. ಪುರಸಭೆಯ ವಿಶೇಷ ಅನುದಾನದಲ್ಲಿ ನವೀಕರಣ ಕಾಮಗಾರಿಗೆ ಅನುದಾನ ಲಭ್ಯವಿದ್ದು ಹೆಚ್ಚಿನ ಅನುದಾನದ ಪ್ರಸ್ತಾವನೆ ಸಿದ್ಧಗೊಳಿಸಿ. ಸಮಾನತೆಯ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನ ದೇಶಕ್ಕೆ ದೊಡ್ಡ ಕೊಡುಗೆಯಾಗಿದೆ. ಅವರು ನಮ್ಮೆಲ್ಲರಿಗೂ ದೇವರ ಸಮಾನ. ಅಂತಹ ಮಹನೀಯರ ಮೂರ್ತಿ ಸುಂದರವಾಗಿ ನವೀಕರಣಗೊಳಿಸುವ ಹೊಣೆ ಅಧಿಕಾರಿಗಳ ಮೇಲೆ ಹೆಚ್ಚಿನ ಜವಬ್ದಾರಿ ಇದೆ ಎಂದು ಹೇಳಿದರು. ವಿಶೇಷ ಮುತುರ್ವಜಿ ವಹಿಸಿ ನವೀಕರಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು. ಯಾವುದೇ ಕಾರಣಕ್ಕೆ ದಲಿತ ಸಂಘಟನೆಯ ಮುಖಂಡರಿAದ ದೂರುಗಳು ಬರದಂತೆ ನಿಗಾವಹಿಸಿ ಕೆಲಸ ಮಾಡಬೇಕು. ಒಂದು ವೇಳೆ ಕಳಪೆ ದೂರು ಬಂದಲ್ಲಿ ಅಂತಹವರ ವಿರುದ್ಧ ನಿರ್ಧಾಕ್ಷಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ನವೀಕರಣ ಕಾಮಗಾರಿ ಮುಗಿಯವರಿಗೂ ಸಂಬAಧಪಟ್ಟಣAತ ಅಧಿಕಾರಿಗಳು ಆಗಾಗ ಬಂದು ಪರಿಶೀಲನೆ ಮಾಡುವಂತೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮಾನಪ್ಪ ಮೇಸ್ತಿç, ವೆಂಕಟೇಶ ಮಕ್ತಾಲ್, ಖಾಜಾಹುಸೇನ್, ತಾಲೂಕು ಜೆಡಿಎಸ್ ತಾಲೂಕಾಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಕಲ್, ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಮುಖಂಡರಾದ ಶರಣಪ್ಪ ಬಳೆ, ರೇಣುಕಾ ಎಂ.ಸ್ವಾಮಿ, ಇಸಾಕ್‌ಸಾಬ್ ಮೇಸ್ತಿç, ಶಾಲಂ ಉದ್ದಾರ, ಮಂಜುನಾಥ ಮಾತ್ಪಳ್ಳಿ, ಹನುಮಂತ ಮನ್ನಾಪೂರಿ, ದಾವುದ್ ಹೌವುಟಿ, ಇತರರು ಇದ್ದರು.
