ಉದಯವಾಹಿನಿ, ಸಿಂಧನೂರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್-47 ರಿಂದ ಮೈಲ್-60 ರ ವ್ಯಾಪ್ತಿಯಲ್ಲಿರುವ ಕೆಳಭಾಗದ ರೈತರ ಜಮೀನುಗಳಿಗೆ ಕಾಲುವೆಗೆ ನೀರು ಹರಿಸುವ ಮೂಲಕ ತಾಲ್ಲೂಕು ತಹಶೀಲ್ದಾರ್ ಕಛೇರಿಯಲ್ಲಿ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ  ಸಭೆ ನಡೆಸಲಾಯಿತು.
ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಅವರು ಕೆಳಭಾಗದ ಉಪ ಕಾಲುವೆಗಳು ಮತ್ತು 54,55 ವಿತರಣಾ ಕಾಲುವೆಯ ಎರಡನೇ ಹಂತದ ವ್ಯಾಪ್ತಿಯಲ್ಲಿ ಬರುವ ಭತ್ತ ಹಾಗೂ ಕೊನೆಯ ಭಾಗದಲ್ಲಿರುವ ರೈತರ ಜೋಳ ಹಾಗೂ ಇತರೆ ಬೆಳೆಗಳಿಗೆ, ಜಾನುವಾರುಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಮತ್ತು ಸಿಂಧನೂರು ತಾಲೂಕಿನ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕಾಗಿರುವ ಪ್ರಯುಕ್ತ ಸದರಿ ಕಾಲುವೆ ಮೂಲಕ ನೀರನ್ನು ಹರಿಸುತ್ತಿರುವುದರಿಂದ ಕಾಲುವೆಗಳ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ ವ್ಯವಸ್ಥೆ ಒದಗಿಸಲಾಗಿದೆ.
 ಕಾಲುವೆಗಳ ಪ್ರದೇಶದಲ್ಲಿ ಆನಧೀಕೃತವಾಗಿ ಹೊಲಗಳಿಗೆ ನೀರನ್ನು ಹರಿಸುವುದಾಗಲಿ ಅಥವಾ ಪಂಪ್ ಸೆಟ್ ಹಾಗೂ ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದು ಹಾಗೂ ಗುಂಪು ಗುಂಪಾಗಿ ಜನರು ತಿರುಗಾಡಲು ಸಂಪೂರ್ಣವಾಗಿ ನಿಷೇಧಿಸಿದೆ.ನೋಡೆಲ್ ಅಧಿಕಾರಿಗಳಾಗಿ  54ರ ಅಪ್ಸರೆ ರೀಚ್ ಅಧಿಕಾರಿ ನಗರಸಭೆ ಪೌರಾಯುಕ್ತರು ಮಂಜುನಾಥ್ ಗುಂಡೂರು.54ಲೋಹವರ ರೀಚ್ ಅಧಿಕಾರಿ ಮಹಮ್ಮದ್ ನೀಜಿರ್ ಸಾಬ್.  54ಉಪಕಾಲವಗೆ 9 ಕಾಲುವೆಗೆ ಮಲ್ಲಯ್ಯ ಆರ್ ಸಿಆರ್ ಸಿ. 36 ಕಾಲುವೆಗೆ ಚಂದ್ರಶೇಖರ್ ಕುರಿ. 55 ಕಾಲುವೆ ಶಿವಪ್ಪ ಐಹೋಳೆ.40ರ ಕಾಲುವೆ ರುದ್ರಮುನಿ.42 ಕಾಲುವೆ ಸಿಡಿಪಿಓ ಲಿಂಗನಗೌಡ 45.46. ಕಾಲುವೆಗೆ ಶಿವಮಾನಪ್ಪ.48 ಕಾಲುವೆಗೆ ಅಶೋಕ್ ಸಿಡಿಪಿಓ.49 ಲಿಂಗಪ್ಪ ಅಂಗಡಿ. ಮೈಲು 49.69 ವರಿಗೆ ನ ಕಾಲುವೆ ಗೇಜ್ ಚಂದ್ರಪ್ಪ ಅವರನ್ನು ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲ್-17 ರಿಂದ ಮೈಲ್-60 ರ ವ್ಯಾಪ್ತಿಯಲ್ಲಿನ ಉಪ ಕಾಲುವೆಗಳು ಮತ್ತು 5455 ವಿತರಣಾ ಕಾಲುವೆಯ ಎರಡನೇಯ ಹಂತದ ವರೆಗೆ ಕಾಲುವೆಗಳ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ದಿ: 30-10-2023 ರ ಸಾಯಂಕಾಲ 06-00 ಗಂಟೆಯಿಂದ ದಿ.07-11-2023 ರ ಸಾಯಂಕಾಲ 06-00 ಗಂಟೆಯವರೆಗೆ ಕಾಲುವೆ ಪ್ರದೇಶದ ಸುತ್ತಮುತ್ತಲು 100 ಮೀಟರ ವ್ಯಾಪ್ತಿಯಲ್ಲಿ.ದಂಡ ಪ್ರಕ್ರಿಯೆ ಸಂಹಿತೆ 1973 ರ ಕಲಂ: 144 ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸುವುದು ಎಂದು ತಾಲ್ಲೂಕು ತಹಶೀಲ್ದಾರ್ ಅರುಣ್ ಕುಮಾರ್ ಎಚ್ ದೇಸಾಯಿ ಅವರು ತಿಳಿಸಿದರು. 
 ಈ.ಸಂ.ಮಾಜಿ ಸಚಿವ ಹಾಗೂ ಕೆಓಫ್ ರಾಜ್ಯ ಅಧ್ಯಕ್ಷರು ವೆಂಕಟರಾವ್ ನಾಡಗೌಡ. ಬಿಜೆಪಿ ಪಕ್ಷದ ಮುಖಂಡರು ಹನುಮಗೌಡ ಬೆಳಗುರ್ಕಿ. ನೀರಾವರಿ ಇಲಾಖೆ  ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!