
ಉದಯವಾಹಿನಿ ಅರಸಿಕೆರೆ: ಬೆಳಕಿನ ಹಬ್ಬ ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ಅರಸೀಕೆರೆ ರೈಲ್ವೆ ಜಂಕ್ಷನ್ ನಿಲ್ದಾಣದಲ್ಲಿ ಮತ್ತು ಚಲಿಸುವ ರೈಲುಗಳಲ್ಲಿ ಸ್ಪೋಟಕ ವಸ್ತುಗಳು ಹಾಗೂ ಮಾದಕ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸದಂತೆ ನೆನ್ನೆ ತಪಾಸಣೆ ನಡೆಸಲಾಯಿತು. ದೇಶದ ಎಲ್ಲಾ ರಾಜ್ಯಗಳ ಸಂಪರ್ಕ ಕಲ್ಪಿಸುವ ಹಲವು ರೈಲುಗಳು ಅರಸೀಕೆರೆ ಜಂಕ್ಷನ್ ಮೂಲಕ ಹಾದು ಹೋಗುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಶ್ರೀ ರಾಕೇಶ್ ಕುಮಾರ್, ಇನ್ಸ್ಪೆಕ್ಟರ್ ರೈಲ್ವೆ ಇಲಾಖೆ, ಇವರ ಮಾರ್ಗದರ್ಶನದಲ್ಲಿ ಶ್ರೀ ಕೆ ಗವಸ್ಕರ್, ಸಬ್ ಇನ್ಸ್ಪೆಕ್ಟರ್ , ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಶ್ರೀ ತಿಪ್ಪೇಸ್ವಾಮಿ, ಶ್ರೀ ಕಾಂತರಾಜ್, SI/GRP, ಶೋಧ ನಾಯಿ ತಂಡದಿಂದ ಮತ್ತು ತಪಾಸಣೆ ನಡೆಸಿದರು. ರೈಲ್ವೆ ಪ್ರಯಾಣದವೇಳೆ ಯಾವುದೇ ಸ್ಪೋಟಕ ಹಾಗೂ ಮಾದಕ ವಸ್ತುಗಳನ್ನು ಸಾಗಿಸದಂತೆ ರೈಲ್ವೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಿದರು. ಯಾರಾದರೂ ಸ್ಪೋಟಕ ವಸ್ತುಗಳನ್ನು ಸಾಗಿಸಿದರೆ ರೈಲ್ವೆ ಕಾಯಿದೆ ಸೆಕ್ಷನ್ 164 ರಲ್ಲಿ ಪ್ರಕರಣಗಳನ್ನು ದಾಖಲಿಸಲಾಗುಹುದು ಸಾರ್ವಜನಿಕರಿಗೆ ತಿಳಿಸಿದರು.
