
ಉದಯವಾಹಿನಿ, ಮುದ್ದೇಬಿಹಾಳ ; ಮುದ್ದೇಬಿಹಾಳ ಪಟ್ಟಣದ ಜ್ಞಾನ ಭಾರತಿ ಪ್ರೌಢಶಾಲೆಯಲ್ಲಿ ಮಂಗಳವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಆಚರಣೆ ಮಾಡಲಾಯಿತು ಈ ವೇಳೆ ಮಾತನಾಡಿದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ರಾಷ್ಟ್ರೀಯ ಏಕತಾ ದಿನವು ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಸ್ಮರಿಸುತ್ತದೆ, ಅವರು ಅನೇಕ ರಾಜಪ್ರಭುತ್ವದ ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ಸೇರಲು ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಭಾರತದ ಉಕ್ಕಿನ ಮನುಷ್ಯ ಎಂದು ಪ್ರಸಿದ್ಧರಾಗಿದ್ದರು ಮತ್ತು ಭಾರತ ಗಣರಾಜ್ಯದ ಸ್ಥಾಪಕ ನಾಯಕರಲ್ಲಿ ಒಬ್ಬ ಮಹಾ ನಾಯಕರು 2014 ರಲ್ಲಿ, ಭಾರತ ಸರ್ಕಾರವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಏಕತಾ ದಿನವನ್ನು ಪರಿಚಯಿಸಿತು. ದೇಶಕ್ಕಾಗಿ ಅವರು ಮಾಡಿದ ಅಸಾಧಾರಣ ಕೆಲಸಗಳಿಗಾಗಿ ಅವರು ಯಾವಾಗಲೂ ಸ್ಮರಿಸಲ್ಪಡುತ್ತಾರೆ ಮತ್ತು ಭಾರತವನ್ನು ಒಗ್ಗೂಡಿಸಲು ಅವರು ಶ್ರಮ ಅಪಾರವೆಂದರು ಈ ವೇಳೆ ದೈಹಿಕ ಶಿಕ್ಷಕ ಬಿ .ಟಿ ಭಜಂತ್ರಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು ಶಿಕ್ಷಕಿ ಶಬಾನಾ ಲೈನ್ ಸ್ವಾಗತಿಸಿದರೆ ಶಿಕ್ಷಕ ರಮೇಶ ಮಡಿವಾಳ ವಂದಿಸಿದರು
