
ಉದಯವಾಹಿನಿ,ದೇವರಹಿಪ್ಪರಗಿ: ಪಟ್ಟಣದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣವಾಗುತ್ತಿರುವ ಮನೆಗಳಿಗೆ ಕಡಿಮೆ ಅನುದಾನ ನೀಡಿ ಮೋಸ ಮಾಡಲಾಗುತ್ತಿದೆ, ಗುತ್ತಿಗೆದಾರ, ಅಧಿಕಾರಿಗಳು ಸೇರಿ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿಗಳಾದ ಪ್ರಕಾಶ ಸಿಂದಗಿ ಅವರಿಗೆ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷರಾದ ರಹಿಮಾನ್ ಕನಕಾಲ್ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಕಾರದಿಂದ ಮನೆಗಳ ನಿರ್ಮಾಣಕ್ಕೆ 6,89,000ರೂ ನೀಡಲಾಗುತ್ತದೆ, ಇದರಲ್ಲಿ ಕೇಂದ್ರ ಸರ್ಕಾರದಿಂದ 1,50,000ರೂ ಹಾಗೂ ರಾಜ್ಯ ಸರ್ಕಾರದಿಂದ 1,20,000ರೂ ಸಬ್ಸಿಡಿ ನೀಡಲಾಗುತ್ತಿದ್ದು, ಈ ಯೋಜನೆಯ ಫಲಾನುಭವಿಗಳು ಡಿಡಿ ಮೂಲಕ ಸರ್ಕಾರಕ್ಕೆ 1,03,000ರೂ ತುಂಬಬೇಕು.ಈ ಒಟ್ಟು ಸೇರಿ 3,73000ರೂ ಉಳಿದ 3,15,000ರೂ ಮೊತ್ತದ ಹಣವನ್ನು ಲೇಬರ್ ಕಚೇರಿ ಅಥವಾ ವಿವಿಧ ಬ್ಯಾಂಕುಗಳ ಸಹಾಯದಿಂದ ಪಡೆದಿರುತ್ತಾರೆ ಎಂದು ನಮಗೆ ತಿಳಿಸುತ್ತಾರೆ ಆದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಕೇಳಿದಾಗ ಇದು ಸುಳ್ಳು ಇರುತ್ತದೆ ಎಂದು ತಿಳಿಸಿದ್ದಾರೆ. ಈ ರೀತಿ ಸುಮಾರು ಪಟ್ಟಣದಲ್ಲಿ 200 ಮನೆಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಿರುವುದು ಕಂಡುಬಂದಿದೆ.
ಈ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಪತ್ರದ ಮೂಲಕ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ, ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಲಿ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ. ಕೆಲ ಜನರಿಗೆ ಮನೆಗೆ ಬೇಕಾಗುವ ವಸ್ತುಗಳನ್ನು ನೀಡಿದ್ದಾರೆ. ಈ ಕುರಿತು ಸಂಬಂಧ ಪಟ್ಟ ಇಲಾಖೆಯವರು ಪ್ರತಿ ಮನೆಗೆ ಬರುವ ಅನುದಾನ ಹಾಗೂ ಸಬ್ಸಿಡಿಯ ಕುರಿತು ಮಾಹಿತಿ ಬಹಿರಂಗಪಡಿಸಬೇಕು ಹಾಗೂ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಟ್ಟು ಬಡವರಿಗೆ ಅನುಕೂಲ ಕಲ್ಪಿಸಬೇಕು ಹಾಗೂ ಈ ಕುರಿತು ಸೂಕ್ತ ತನಿಖೆ ಆಗಬೇಕು ಇಲ್ಲದಿದ್ದರೆ ಬರುವಂತಹ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಮುಖಂಡರುಗಳಾದ ಸಿದ್ರಾಮಪ್ಪ ಅವಟಿ, ಇಮಾಮ್ ಮುಲ್ಲಾ, ಮಹಿಬೂಬ ವಾಲೀಕಾರ, ಪರಶುರಾಮ ಗೊಲ್ಲರ, ಸುನೀಲ ಕನಮಡಿ, ಪ್ರವೀಣ ಪವ್ಹಾರ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
