
ಉದಯವಾಹಿನಿ ಸವದತ್ತಿ: ಆಯುಷ್ಮಾನ ಭವ ಆರೋಗ್ಯ ಅಭಿಯಾನ ಯೋಜನೆಯಡಿ ಆರೋಗ್ಯ ಸೇವೆಗಳು ಚಿಕಿತ್ಸೆ ಹಾಗೂ ಸಮಗ್ರ ರೋಗಗಳ ಮಾಹಿತಿ ಬಗ್ಗೆ ವಿಶೇಷ ಆರೋಗ್ಯ ಮೇಳವನ್ನು ಪ್ರತಿ ಗ್ರಾಮ ಹಳ್ಳಿ
ಹೋಬಳಿ ಉಪಕೇಂದ್ರ ಮಟ್ಟದಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ಜರುಗುತ್ತಿರುವ ಬಗ್ಗೆ ಡಾಕ್ಟರ್ ಜ್ಯೋತಿ ಬಸರಿ ತಿಳಿಸಿದರು. ಸದರಿ ಆರೋಗ್ಯ ಮೇಳದಲ್ಲಿ ಭಾಗವಹಿಸಿ ಆಯುಷ್ಮಾನ ಭವ ಅಭಿಯಾನ ಯಶಸ್ವಿ ಗೊಳಿಸಲು ಕರೆ ನೀಡಿದರು. ಸದರಿ ಆರೋಗ್ಯ ಮೇಳದಲ್ಲಿ ಎನ್ಸಿಡಿ ರಕ್ತ ಪರೀಕ್ಷೆ ಕಫ ಪರೀಕ್ಷೆ ಬಗ್ಗೆ ಸಮುದಾಯ ಆರೋಗ್ಯ ಅಧಿಕಾರಿ ನಿಂಗಣ್ಣ ಎಚ್ ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿಗಳಾದ ಎ ಕೆ ಮುಲ್ಲಾ ಎನ್ ಎ ಪೂಜೇರ ರಮೇಶ್ ಗೋವನ್ನವರ ಮಂಜುಳಾ ಪವಾರ ಶ್ರೀದೇವಿ ಪತ್ತಾರ ಆಶಾ ಕಾರ್ಯಕರ್ತೆಯರ ಗ್ರಾಮಸ್ಥರು ಗರ್ಭಿಣಿ ಸ್ತ್ರೀಯರು ಉಪಸ್ಥಿತರಿದ್ದರು. ಆಯ್ ಎಸ್ ದಿಗಂಬರಮಠ ಕಾರ್ಯ ಕ್ರಮವನ್ನು ನಡೆಸಿಕೊಟ್ಟರು.
