
ಉದಯವಾಹಿನಿ, ಸಿಂಧನೂರು: ಮಕ್ಕಳ ಕಲಿಕಾ ಮಟ್ಟ ಪರಿಶೀಲನೆ ಹಾಗೂ ಕುಡಿಯ ನೀರಿನ ಕೆರೆ ವೀಕ್ಷಣೆ ಹಾಗೂ ಶಾಲೆಯ ಮಕ್ಕಳೊಂದಿಗೆ ಬಿಸಿಯೂಟವನ್ನು ಆರ್ ಎಚ್ ನಂಬರ್ 1ರಲ್ಲಿ ಸರಕಾರಿ ಶಾಲೆಯ ಮಕ್ಕೊಂದಿಗೆ ಮದ್ಯಾಹ್ನದ ಬಿಸಿ ಊಟವನ್ನು ರಾಹುಲ್ ತುಕಾರಾಂ ಪಾಂಡ್ವೆ ಮಾನ್ಯ ಮುಖ್ಯ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಸವಿದರು ಜವಳ ಗೇರಾ ಹಾಸ್ಟೇಲ್ ಗೆ ಭೇಟಿ ನೀಡಿ ನಂತರ ಆರ್ ಎಚ್ ನಂಬರ್ ಕ್ಯಾಂಪಿನಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ವಿವಿಧ ತರಗತಿಗಳ ಕೋಣೆಗಳಿಗೆ ತೆರಳಿ ವೀಕ್ಷಣೆ ಮಾಡಿದರು ನಂತರ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿರುವ ಬಗ್ಗೆ ವೀಕ್ಷಣೆ ಮಾಡಿದರು.ಶಾಲೆಯಲ್ಲಿ ಶಿಕ್ಷಕರ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡರು ಮತ್ತು ಶಾಲೆಯ ಆವರಣದಲ್ಲಿರುವ ಕುಡಿಯುವ ನೀರಿನ ಘಟಕ ಸರಿಪಡಿಸಲು ಪಿಡಿಒ ರವರಿಗೆ ತಿಳಿಸಿದರು ಆರ್,ಎಚ್,ಕ್ಯಾಂಪ್ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಬಿಸಿಯೂಟದ ಕೋಣೆ,ಬೋಜನಾಲಯ ಕಾಮಗಾರಿ ವೀಕಷಣೆ ಮಾಡಿ ನಂತರ ಮಕ್ಕಳೊಂದಿಗೆ ಸಂವಾದ ಮಾಡಿ ಊಟ ಸರಿಯಾಗಿ ನೀಡುತಿದ್ದಾರೆಯೇ ನಿಮಗೆ ಶಿಕ್ಷರು ಪಾಠ ಚನ್ನಾಗಿ ಮಾಡುತ್ತಿದ್ದಾರೆಯೆ ಎಂಬ ಪ್ರಶ್ನೆಯನ್ನು ಕೇಳಿ ನಂತರ ಶಾಲೆಯ ಮಕ್ಕಳೊಂದಿಗೆ ಬಿಸಿಯೂಟ ಸವಿದರು,ನಂತರ ಜೆಜೆಎಂ ಕಾಮಗಾರಿ ಪರಿಶೀಲನೆ ಮಾಡಿ ಉತ್ತಮ ಗುಣಮಟ್ಟದ ಪೈಪುಗಳನ್ನು ಅಳವಡಿಸಿ ಅದಷ್ಡು ಬೇಗಾ ಕಾಮಗಾರಿ ಮುಗಿಸಿ ಎಂದು ಎಇಇ ಶಿವಪ್ಪರವರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಶಶಿಕಾಂತ ಶಿವಪುರಿ ಉಪ ಕಾರ್ಯದರ್ಶಿ, ಕಾರ್ಯನಿರ್ವಾಹಕ ಅಭಿಯಂತರರು ಶಿವಪ್ಪ. ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ, ಬಿಒ ಸೋಮಶೇಖರಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಲಿಂಗನಗೌಡ, ಆರ್ ಎಚ್ ನಂಬರ್, ಗ್ರಾಮ ಪಂಚಾಯತ್ ಅಧ್ಯಕ್ಷ ಆಲಂ ಭಾಷಾ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
