
ಉದಯವಾಹಿನಿ, ಸಿಂಧನೂರು :ನಗರಸಭೆ ಸಿಂಧನೂರು ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳನ್ನು ರೇಬಿಸ್ ಚುಚ್ಚುಮದ್ದಿಗಾಗಿ ಸೆರೆ ನೀಡಲಾಗುತ್ತದೆ ಎಂದು ನಗರ ಸಭೆ ಪೌರಾಯುಕ್ತರು ಮಂಜುನಾಥ್ ಗುಂಡೂರು ಅವರು ತಿಳಿಸಿದರು.ಸಿಂಧನೂರು ನಗರದ ವ್ಯಾಪ್ತಿಯಲ್ಲಿ ಇರುವ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಹಲವಾರು ಬಾರಿ ಸಾರ್ವಜನಿಕರು ಕಡಿತದ ಕುರಿತಾಗಿ ನಗರಸಭೆಗೆ ಸಾಕಷ್ಟು ದೂರುಗಳು ಸ್ವೀಕೃತವಾಗಿದ್ದು. ಕಡಿತಕ್ಕೆ ಸಂಬಂಧಿಸಿದಂತೆ ತಾಲೂಕ ಆಸ್ಪತ್ರೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ,ಹಲವು ಸಾರ್ವಜನಿಕರು ಹಾಗೂ ನಗರಸಭೆಯ ಸದಸ್ಯರು ಬೀದಿ ನಾಯಿಗಳನ್ನು ಹಿಡಿಯುವಂತೆ ಮನವಿ ಸಲ್ಲಿಸಿದ ಪ್ರಯುಕ್ತ ನಗರಸಭೆ ಆರೋಗ್ಯ ಶಾಖೆಯ ಸಿಬ್ಬಂದಿಯೊಂದಿಗೆ ನುರಿತ ನಾಯಿ ಹಿಡಿಯುವ ತಜ್ಞರೊಂದಿಗೆ ನಾಯಿಗಳನ್ನು ಸೆರೆ ಹಿಡಿಯಲಾಗಿದೆ,ನಗರದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪಶು ಸಂಗೋಪನ ಅಧಿಕಾರಿಗಳು ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳು ಸಮ್ಮುಖದಲ್ಲಿ ಹಿಡಿದ ಎಲ್ಲಾ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಕಿಸಿ ಬಿಡಲಾಗುವುದು,ಎಲ್ಲಾ ಪ್ರಾಣಿಗಳಿಗೆ ಬದುಕುವ ಹಕ್ಕಿದೆ ಎಂಬ ಧ್ಯೇಯದಡಿ ನಾಯಿಗಳನ್ನು ಹಿಡಿಯುವ ಸಂದರ್ಭದಲ್ಲಿ ಅವುಗಳಿಗೆ ಯಾವುದೇ ಹಾನಿ, ಗಾಯ,ಹಿಂಸೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಲಾಗಿದ್ದು. ನಗರದ ಆರೋಗ್ಯ ಹಾಗೂ ಸ್ವಾಸ್ಥ್ಯಕ್ಕಾಗಿ ಎಲ್ಲಾ ಸಾರ್ವಜನಿಕರು ಸಹಕರಿಸಲು ನಗರಸಭೆ ಕೋರಿದೆ, ಈ ಸಂದರ್ಭದಲ್ಲಿ ಆರೋಗ್ಯ ಶಾಖೆಯ ನಿರೀಕ್ಷಕರಾದ ಕಿಶನ್, ಲಕ್ಷ್ಮಿಪತಿ, ಮಹೇಶ, ಮೇಸ್ತ್ರಿ ಜಗದೀಶ್, ಅಮರೇಶ, ವೆಂಕೊಬ್, ಮೌನೇಶ ಹಾಜರಿದ್ದರು,
