ಉದಯವಾಹಿನಿ, ಬಂಗಾರಪೇಟೆ: ಪ್ರಸ್ತುತ ಯುವ ಸಮುದಾಯ ಮಾದಕ ವ್ಯಸನಿಗಳದಾಸನಾಗಿ ತನ್ನ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸದೆ ತನ್ನ ಜೀವನವನ್ನು ತಾನೇ ಅಂತ್ಯಗೊಳಿಸಿಕೊಳ್ಳುವುದರ ಮೂಲಕ, ಸಮಾಜಕ್ಕೆ ಮಾರಕವಾಗಿ ಪರಿಣಮಿಸಿರುವುದು ಅತ್ಯಂತ ದುರಾದೃಷ್ಟಕರ, ಆದ್ದರಿಂದ ಯುವ ಸಮುದಾಯ ಮಾದಕ ಪ್ರಸನ್ನಗಳನ್ನು ತ್ಯಜಿಸುವುದರ ಮೂಲಕ ಉತ್ತಮ ಸಾಮಾಜಿಕ ಜೀವನಕ್ಕೆ ಮುನ್ನುಡಿ ಬರೆಯಬೇಕು ಎಂದು ಡಿ ವೈ ಎಸ್ ಪಿ ಪಾಂಡುರಂಗ ಅಭಿಪ್ರಾಯಪಟ್ಟರು.
ಪಟ್ಟಣದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಬಂಗಾರಪೇಟೆ ಪೊಲೀಸ್ ಅಧಿಕಾರಿಗಳು ಮಾದಕ ವ್ಯಸನಿಗನ ವಿರೋಧಿ ಜಾತಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು.
ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಅಥವಾ ನಡವಳಿಕೆಯ ಸ್ಥಿತಿಯನ್ನು ಬದಲಾಯಿಸುವ ಮೂಲಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

Leave a Reply

Your email address will not be published. Required fields are marked *

error: Content is protected !!