ಉದಯವಾಹಿನಿ, ಕೋಲಾರ: ಕುರುಗಲ್-ವೇಮಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು ತಿಂಗಳುಗಳಿಂದ ಅಕ್ರಮವಾಗಿ, ಬಾರಿ ವಾಹನಗಳಿಂದ ಮಣ್ಣು ಸಾಗಾಣಿಕೆ ರಾಜೋರೋಷವಾಗಿ ನಡೆಯುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ವೇಮಗಲ್ ಹೋಬಳಿ ಕೈಗಾರಿಕಾ ಪ್ರದೇಶದ ರೈತ ಮತ್ತು ಕಾಮಿರ್ಕರ ಅಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ.

ಸದರಿ ಅಕ್ರಮ ಸಾಗಾಣಿಕೆಯನ್ನು ಟ್ರಕ್ ನಂ-೫೨ ೪೮೧೧ & ಕೆಎ-೨೮ ಸಿ-೪೫೧೬, ಸುಮಾರು ಟಿಪ್ಪರ್ ವಾಹನಗಳು, ೪ ಜೆ.ಸಿ.ಬಿ ವಾಹನಗಳ ಮುಖಾಂತರ ರವಿ ಬಿನ್ ಚಿಕ್ಕಪ್ಪಯ್ಯ ಕಲ್ವಮಂಜಲಿ ಎಂಬುವವರು ಕೋಲಾರ-ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ಮುಖಾಂತರ ಅಂದರೆ ವೇಮಗಲ್ ಪೊಲೀಸ್ ಠಾಣೆಯ ಮುಂಬಾದಲ್ಲೇ ರಾಜಾರೋಷವಾಗಿ ಹಾದು ಹೋಗುತ್ತಿದೆ.
ಸದರಿ ಮೇಲ್ಕಾಣಿಸಿದ ವಾಹನಗಳಲ್ಲಿ ಮಣ್ಣನ್ನು ವೇಮಗಲ್ ಕೈಗಾರಿಕಾ ಪ್ರದೇಶದ ಟಾಟಾ ಕಂಪನಿ ಮತ್ತು ಇನ್ನಿತರೆ ಖಾಸಗಿ ಕಂಪನಿಗಳಿಗೆ ಸಾಗಾಣಿಕೆ ಮಾಡುತ್ತಿರುತ್ತಾರೆ, ಸದರೀ ಮಣ್ಣು ಸಾಗಾಣಿಕೆಗೆ ಯಾವ ಇಲಾಖೆಯ ಹಿರಿಯ ಅಧಿಕಾರಿಗಳು ಅನುಮತಿ ನೀಡಿರುವುದಿಲ್ಲ ಹಾಗೂ ಸರ್ಕಾರಕ್ಕೆ ರಾಜಧನ ಪಾವತಿ ಮಾಡದೇ ಅಕ್ರಮವಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಅಕ್ರಮವಾಗಿ ಯತೇಚ್ಛವಾಗಿ ಹಣ ಸಂಪಾದನೆ ಮಾಡುತ್ತ ರಾತ್ರಿ ಇಡೀ ಲೋಡುಗಟ್ಟಲೆ ಸಾಗಾಣಿಕೆ ಮಾಡುತ್ತಲೇ ಇರುತ್ತಾನೆ.

Leave a Reply

Your email address will not be published. Required fields are marked *

error: Content is protected !!