ಉದಯವಾಹಿನಿ, ಬೆಂಗಳೂರು:  ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಿಗೆ ಹಾಸಿಗೆ ಮತ್ತು ತಲೆದಿಂಬು ಪೂರೈಕೆ ಮಾಡಿದ್ದು, ಈ ಟೆಂಡರ್‌ನಲ್ಲಿ ನಡೆದಿರುವ ಅವ್ಯವಹಾರ ಕುರಿತು ವಿದ್ಯಾರ್ಥಿಗಳು ನೀಡಿರುವ ದೂರನ್ನು ಪರಿಗಣಿಸಿ ಕ್ರಮ ವಹಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ವಿವಿಯ ಕುಲಸಚಿವರಿಗೆ ಪತ್ರವನ್ನು ಬರೆದಿದೆ.
ವಿವಿಯ ೯ ಹಾಸ್ಟೇಲ್‌ಗಳಿಗೆ ಹಾಸಿಗೆ ಮತ್ತು ದಿಂಬುಗಳನ್ನು ಪೂರೈಕೆ ಮಾಡುವಂತೆ ಟೆಂಡರ್ ಆಹ್ವಾನಿಸಲಾಗಿತ್ತು. ೧,೮೪೮ ಹಾಸಿಗೆ ಮತ್ತು ೨,೨೭೩ ತಲೆದಿಂಬುಗಳನ್ನು ಖರೀದಿ ಮಾಡುವ ಟೆಂಡರ್ ಅನ್ನು ಕರೆಯಲಾಗಿತ್ತು. ೧,೨೩,೮೦,೬೫೦ ರೂ.ಗಳ ಮೊತ್ತವನ್ನು ಟೆಂಡರ್ ಹೊಂದಿತ್ತು. ಆದರೆ ಕಳಪೆ ಗುಣಮಟ್ಟದ ವಸ್ತುಗಳನ್ನು ಪೂರೈಕೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದರು.
ಪ್ರತಿ ಹಾಸಿಗೆಗೆ ೫,೯೦೦ ರೂ.ಗಳನ್ನು ಹಾಗೂ ಪ್ರತಿ ತಲೆದಿಂಬಿಗೆ ೬೫೦ ರೂ.ಗಳನ್ನು ನಿಗದಿ ಮಾಡಲಾಗಿತ್ತು. ಆದರೆ ಪೂರೈಕೆ ಮಾಡಲಾಗಿರುವ ವಸ್ತುಗಳ ಬೆಲೆಯು ಟೆಂಡರ್‌ನಲ್ಲಿ ಉಲ್ಲೇಖಿಸಿದ ಬೆಲೆಗಿಂತ ಕಡಿಮೆ ಬೆಲೆಯದ್ದಾಗಿದೆ. ಪೂರೈಕೆ ಮಾಡಿರುವ ಹಾಸಿಗೆಯ ಬೆಲೆಯು ಕೇವಲ ೨,೫೦೦ ರೂ.ಗಿಂತ ಕಡಿಮೆ ಬೆಲೆ ಇದ್ದು, ದಿಂಬಿನ ಬೆಲೆ ೧೦೦ರೂ.ಗಳು ಇದೆ ಎಂದು ಹಲವು ಅಂಗಡಿ ಮಾಲೀಕರೊಂದಿಗೆ ವಿಚಾರಿಸಿದಾಗ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!