ಉದಯವಾಹಿನಿ, ಬಳ್ಳಾರಿ: ತುಂಗಭದ್ರಾ ಬಲದಂಡೆಯ ಹೆಚ್.ಎಲ್.ಸಿ ಕಾಲುವೆಗೆ ನವೆಂಬರ್ ಕೊನೆವರೆಗೂ ನೀರು ಹರಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ (ನಂಜುಂಡಸ್ವಾಮಿ ಬಣ)ದಿಂದ ಶುಕ್ರವಾರ ಬಳ್ಳಾರಿ ಬಂದ್ ನಡೆಸಲಾಯಿತು. ಬಂದ್ ನಗರದ ಪ್ರಮುಖ ರಸ್ತೆಗಳಲ್ಲಿನ ವಾಣಿಜ್ಯ ಮಳಿಗೆಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿದ್ದವು.ಕೆಲವೊಂದು ತೆರೆದಿದ್ದರೂ, ಬಂದ್ ನಿರತ ರೈತ ಸಂಘದವರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಕೈಗೊಂಡ ಹಿನ್ನೆಲೆಯಲ್ಲಿ ಬಹುತೇಕ ಮಳಿಗೆಗಳು ಬಂದ್ ಆದವು.
ಪ್ರಯಾಣಿಕ ಆಟೋ, ಸಾರಿಗೆ ಬಸ್, ಪೆಟ್ರೋಲ್ ಬಂಕ್, ಶಾಲಾ ಕಾಲೇಜು ಎಂದಿನಂತೆ ನಡೆದವು. ನಗರ ಪ್ರಮುಖ ಗಡಿಗಿ ಚನ್ನಪ್ಪ ವೃತ್ತ, ಮೋತಿ ವೃತ್ತ ರೈತ ಸಂಘಟನೆಗಳು ಬಂದ್ ಮಾಡಿದ್ದರು. ನಂತರ ಡಿಸಿ ಕಚೇರಿ ಎದುರು ಕೆಲವೊತ್ತು ಬೃಹತ್ ಪ್ರತಿಭಟನೆ ನಡೆಸಿದರು.
