ಉದಯವಾಹಿನಿ, ರಾಮನಗರ: ಕೆಲ ವಾರಗಳ ಹಿಂದೆ ರಾಮನಗರ ಜಿಲ್ಲೆಗೆ ಬೆಂಗಳೂರು ಹೆಸರು ನಾಮಕರಣ ಮಾಡುವುದಾಗಿ ಹೇಳಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇದೀಗ ಅದರ ಬಗ್ಗೆ ಕೆಲಸ ಆರಂಭಿಸಿದ್ದಾರೆ. ಪರಿಣಾಮ ಶುಕ್ರವಾರ ಅವರು ಜಿಲ್ಲೆಯ ಬಿಡದಿಯವರೆಗೆ ಮೆಟ್ರೊ ರೈಲು ಸೇವೆ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದಾರೆ.
ಬಿಡದಿಯ ಟಯೋಟ ಕಾರ್ಖಾನೆಯ ಕಾರ್ಯಕ್ರಮದಲ್ಲಿ ಈ ಬಗ್ಗೆ ಘೋಷಣೆ ಮಾಡಿದ ಅವರು, ಸದ್ಯದಲ್ಲೆ ಸರ್ವೇ ಕಾರ್ಯ ಆರಂಭಿಸಲಿರುವುದಾಗಿ ಹೇಳಿದ್ದಾರೆ.
ಬಿಡದಿ ಸ್ಮಾರ್ಟ್ ಸಿಟಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಬದಲಿಸುವ ಘೋಷಣೆ ಮಾಡಿದ್ದಾರೆ ಡಿಕೆ ಶಿವಕುಮಾರ್ ಅವರು. ದಸರಾ ಸಮಯದಲ್ಲಿ ರಾಮನಗರ ಜಿಲ್ಲೆಗೆ ಬೆಂಗಳೂರು ಹೆಸರು ಇಡುವುದಾಗಿ ಹೇಳಿದ್ದಡಿ.ಕೆ.ಶಿವಕುಮಾರ್ ಇದೀಗ ದೀಪಾವಳಿಯ ಸಮಯದಲ್ಲಿ ಈ ಘೋಷಣೆ ಮಾಡಿದ್ದಾರೆ.
