ಉದಯವಾಹಿನಿ, ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದ್ದು, ಪಟಾಕಿಗಳಿಂದ ನಾವು ಎಚ್ಚರವಿರಬೇಕು. ಅದರಲ್ಲೂ ಮಕ್ಕಳ ಬಗ್ಗೆ ಪೋಷಕರು ಬಹಳ ಜಾಗರೂಕತೆ ವಹಿಸಬೇಕು.
ದೀಪಾವಳಿ ಹಬ್ಬದ ವೇಳೆ ಪಟಾಕಿ ಅವಘಡಗಳು ನಡೆದರೆ ದಿನದ 24 ಗಂಟೆಯೂ ಸೇವೆ ನೀಡಲು ಆಸ್ಪತ್ರೆಗಳು ಸಿದ್ದವಾಗಿದೆ.
ಆಸ್ಪತ್ರೆಗೆ ಬರುವ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಮಿಂಟೋ ಹಾಗೂ ವಿಕ್ಟೋರಿಯಾ ಕಣ್ಣಿನ ಆಸ್ಪತ್ರೆ ವೈದ್ಯರು ಒಂದು ವಾರ 24X7 ಕಾರ್ಯನಿರ್ವಹಿಸಲಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು, ಜನರು ತುರ್ತು ಸಹಾಯವಾಣಿ – 9481740137, 08026707176 ಸಂಪರ್ಕಿಸಬಹುದು.
ಪಟಾಕಿಯಿಂದ ಸುಟ್ಟು ದೇಹದ ಯಾವುದೇ ಭಾಗಕ್ಕೆ ಗಾಯವಾದರೇ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ ವಾರ್ಡ್ ತೆರೆಯಲಾಗುತ್ತಿದೆ. ಇನ್ನೂ, ಬೆಂಗಳೂರಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ, ಎಲ್ಲರೂ ಸುಪ್ರೀಂಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಮೀಷನರ್ ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!